ಶನಿ ಗ್ರಹ ವೀಕ್ಷಿಸಿದ ವೇದವರ್ಧನ ಶ್ರೀ

ಉಡುಪಿಯ ಶೀರೂರು ಮಠದ ಮುಂಭಾಗದಲ್ಲಿ ದೂರದರ್ಶಕದ ಮೂಲಕ ವೇದವರ್ಧನ ಶ್ರೀಗಳು ಶನಿ ಗ್ರಹ ವೀಕ್ಷಿಸಿದರು. ಆರ್​.ಮನೋಹರ್​, ಗಣೇಶ್​ ರಾಜ್​ ಸರಳಬೆಟ್ಟು, ಗಾಯತ್ರಿ ಆರ್​. ಮನೋಹರ್​, ಪ್ರಭಾವತಿ ದೇವಾಡಿಗ, ರಾಜೇಶ್​ ಪ್ರಭು ಇತರರಿದ್ದರು.
ಉಡುಪಿಯ ಶೀರೂರು ಮಠದ ಮುಂಭಾಗದಲ್ಲಿ ದೂರದರ್ಶಕದ ಮೂಲಕ ವೇದವರ್ಧನ ಶ್ರೀಗಳು ಶನಿ ಗ್ರಹ ವೀಕ್ಷಿಸಿದರು. ಆರ್​.ಮನೋಹರ್​, ಗಣೇಶ್​ ರಾಜ್​ ಸರಳಬೆಟ್ಟು, ಗಾಯತ್ರಿ ಆರ್​. ಮನೋಹರ್​, ಪ್ರಭಾವತಿ ದೇವಾಡಿಗ, ರಾಜೇಶ್​ ಪ್ರಭು ಇತರರಿದ್ದರು.
Published on: 

* ಆರ್​.ಮನೋಹರ್​ ಆವಿಷ್ಕಾರದ ಬೈನಾಕ್ಯುಲರ್​ಗೆ ಮೆಚ್ಚುಗೆ

ಉಡುಪಿ: ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಪರ್ಕಳದ ಆರ್​.ಮನೋಹರ್​ ಆವಿಷ್ಕರಿಸಿರುವ ಎರಡೂ ಕಣ್ಣುಗಳಲ್ಲಿ ನೋಡಬಹುದಾದ ನೂತನ ದೂರದರ್ಶಕದ ಮೂಲಕ ಹುಣ್ಣಿಮೆಯ ಚಂದ್ರ ಮತ್ತು ಲಕ್ಷಾಂತರ ಕಿಮೀ ದೂರದಲ್ಲಿರುವ ಶನಿ ಗ್ರಹವನ್ನು ಶನಿವಾರ (ಸೆ.26) ರಾತ್ರಿ ವೀಕ್ಷಿಸಿದರು.

ವೇದವರ್ಧನ ತೀರ್ಥ ಶ್ರೀಪಾದರು ದೂರದರ್ಶಕದ ಮೂಲಕ ಶನಿ ಗ್ರಹ ವೀಕ್ಷಿಸಿದರು.
ವೇದವರ್ಧನ ತೀರ್ಥ ಶ್ರೀಪಾದರು ದೂರದರ್ಶಕದ ಮೂಲಕ ಶನಿ ಗ್ರಹ ವೀಕ್ಷಿಸಿದರು.

ನಾನೂ ಸಹ ವಿಜ್ಞಾನ ವಿದ್ಯಾರ್ಥಿ ಆಗಬೇಕೆಂದು ಬಯಸಿದ್ದೆ. ಈಗಲೂ ವಿಜ್ಞಾನದ ಒಲವು ಜಾಸ್ತಿ ಇದೆ ಎಂದು ಶ್ರೀಗಳು ತಿಳಿಸಿದರು. ವಿಶ್ವ ಮನ್ನಣೆ ಪಡೆದ ಮನೋಹರ್​ ಅವರ ಬೈನಾಕ್ಯುಲರ್​ನ ವಿಶೇಷತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಹ ವೀಕ್ಷಣೆಯ ಬಳಿಕ ಶೀರೂರು ಮಠದೊಳಗೆ ಆರ್​.ಮನೋಹರ್​ ಅವರನ್ನು ಸನ್ಮಾನಿಸಿ ಗೌರವಿಸಿದರು.

ದೂರದರ್ಶಕದಲ್ಲಿ ಕಂಡುಬಂದ ಶನಿ ಗ್ರಹ.
ದೂರದರ್ಶಕದಲ್ಲಿ ಕಂಡುಬಂದ ಶನಿ ಗ್ರಹ.

ಮಠದ ಮುಂಭಾಗದಲ್ಲಿ ಅನೇಕ ಭಕ್ತರು, ಪ್ರವಾಸಿಗರು ಶನಿ ಗ್ರಹ ವೀಕ್ಷಿಸಿ ಸಂತಸಪಟ್ಟರು. ಕಾರ್ಯಕ್ರಮ ಸಂಘಟಕ ಗಣೇಶ್​ ರಾಜ್​ ಸರಳಬೆಟ್ಟು, ಗಾಯತ್ರಿ ಆರ್​. ಮನೋಹರ್​, ಪ್ರಭಾವತಿ ದೇವಾಡಿಗ, ರಾಜೇಶ್​ ಪ್ರಭು ಪರ್ಕಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net