ವಜ್ರ ಮಹೋತ್ಸವದ ಯಶಸ್ಸು ಉಡುಪಿ ಜನತೆಗೆ ಸಮರ್ಪಣೆ

ಉಡುಪಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿಯ ವಜ್ರ ಮಹೋತ್ಸವದ ಸಮಾಪನಾ ಸಭೆ ನಡೆಯಿತು. ಯಶ್​ಪಾಲ್​ ಸುವರ್ಣ, ಡಾ. ಕಟ್ಟೆ ರವಿರಾಜ ಆಚಾರ್ಯ, ಕೆ. ರಾಘವೇಂದ್ರ ಕಿಣಿ, ಪ.ವಸಂತ್​ ಭಟ್​, ಗಿರೀಶ್​ ಅಂಚನ್​, ಸತೀಶ್​ ಕುಲಾಲ್​, ಎಂ.ವಲ್ಲಭ ಭಟ್​ ಹಾಗೂ ಪದಾಧಿಕಾರಿಗಳು ಇದ್ದರು.
ಉಡುಪಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿಯ ವಜ್ರ ಮಹೋತ್ಸವದ ಸಮಾಪನಾ ಸಭೆ ನಡೆಯಿತು. ಯಶ್​ಪಾಲ್​ ಸುವರ್ಣ, ಡಾ. ಕಟ್ಟೆ ರವಿರಾಜ ಆಚಾರ್ಯ, ಕೆ. ರಾಘವೇಂದ್ರ ಕಿಣಿ, ಪ.ವಸಂತ್​ ಭಟ್​, ಗಿರೀಶ್​ ಅಂಚನ್​, ಸತೀಶ್​ ಕುಲಾಲ್​, ಎಂ.ವಲ್ಲಭ ಭಟ್​ ಹಾಗೂ ಪದಾಧಿಕಾರಿಗಳು ಇದ್ದರು.
Published on: 

* ಡಾ. ಕಟ್ಟೆ ರವಿರಾಜ ಆಚಾರ್ಯ ಕೃತಜ್ಞತೆ

* ಕಡಿಯಾಳಿ ಗಣೇಶೋತ್ಸವದ ಸಮಾಪನಾ ಸಭೆ

ಉಡುಪಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕಡಿಯಾಳಿಯ 60ನೇ ವರ್ಷದ ವಜ್ರ ಮಹೋತ್ಸವವು ವಾರಗಳ ಕಾಲ ಅದ್ದೂರಿಯಾಗಿ ಸಾಂಗವಾಗಿ ಸಾಗಿತ್ತು. ಉಡುಪಿ ಮಹಾಜನತೆಯ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆದಿದ್ದು, ಇದರ ಶ್ರೇಯಸ್ಸನ್ನು ಉಡುಪಿಯ ಜನತೆಗೆ ಸಮರ್ಪಣೆ ಮಾಡುತ್ತವೆ ಎಂದು ಸಮಿತಿಯ ಅಧ್ಯಕ್ಷ ಡಾ. ಕಟ್ಟೆ ರವಿರಾಜ ಆಚಾರ್ಯ ಕೃತಜ್ಞತೆ ಸಲ್ಲಿಸಿದರು.

ಉಡುಪಿ ಶಾರದಾ ಕಲ್ಯಾಣ ಮಂಟಪದಲ್ಲಿ ಸೋಮವಾರ (ಸೆ.28) ಆಯೋಜಿಸಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕಡಿಯಾಳಿಯ 60ನೇ ವರ್ಷದ ಸಮಾಪನಾ ಸಭೆಯಲ್ಲಿ ಮಾತನಾಡಿದರು.

ವಜ್ರಮಹೋತ್ಸವ ಸಮಿತಿಯ ಗೌರಾಧ್ಯಕ್ಷ ಹಾಗೂ ಉಡುಪಿ ಶಾಸಕ ಯಶಪಾಲ್​ ಸುವರ್ಣ ಮಾತನಾಡಿ, ಕಾರ್ಯಕರ್ತರ ಹುಮ್ಮಸ್ಸು ಮತ್ತು ಹಿರಿಯರ ಮಾರ್ಗದರ್ಶನದಿಂದಾಗಿ ಕಡಿಯಾಳಿ ಗಣೇಶೋತ್ಸವವು ರಾಜ್ಯಕ್ಕೆ ಮಾದರಿಯಾಯತು ಎಂದರು.

ಗಣೇಶೋತ್ಸವದ ಮೆರವಣಿಗೆಗೆ ಶೋಭೆ ನೀಡಿದ್ದ ಶಾರದೆಯ ವೇಷಧಾರಿ ಬಾಲಕಿ ಸಾನ್ವಿಯನ್ನು ಗೌರವಿಸಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್​ ಅಂಚನ್​ ಕಾರ್ಯಕ್ರಮಗಳ ಅವಲೋಕನ ಮಾಡಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ಅಧ್ಯಕ್ಷ ಪ.ವಸಂತ್​ ಭಟ್​ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಸತೀಶ್​ ಕುಲಾಲ್​ ಕಡಿಯಾಳಿ ಸ್ವಾಗತಿಸಿದರು. ಕೋಶಾಧಿಕಾರಿ ಎಂ.ವಲ್ಲಭ ಭಟ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net