ಕುಂದಾಪುರ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಸತೀಶ್ ಹಾಗೂ ಟೀಮ್ ಏಕತಾದ ಹಿರಿಯರು ಜೊತೆಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಕಾರ್ಯಕ್ರಮರಹಿತವಾಗಿ ನಡೆದ ಈ ಸಮಾರಂಭವನ್ನು ಟೀಮ್ ಏಕತಾದ ಸುಮಾರು 200 ಸದಸ್ಯರನ್ನೇ ಮುಖ್ಯ ಅತಿಥಿಗಳಾಗಿ ಪರಿಗಣಿಸಿ ಆಯೋಜಿಸಿದ್ದು ವಿಶೇಷವಾಗಿತ್ತು. ಬಂದ ಅಷ್ಟೂ ಸದಸ್ಯರಿಗೆ ವಿಶೇಷ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಲಾಯಿತು. ಅಷ್ಟೂ ಮಂದಿಗೆ ಭೋಜನ ಹಾಗೂ ಐಸ್‌ಕ್ರೀಮ್ ಸಹಿತ ಸತ್ಕರಿಸಲಾಯಿತು.