ಶ್ರೀ ಸುಖತೀರ್ಥಾನುಗ್ರಹ ಪ್ರಶಸ್ತಿ ವಿತರಣೆ

ಉಡುಪಿಯ ಡಾ. ಬಿ.ಗೋಪಾಲ ಆಚಾರ್ಯ ಅವರಿಗೆ ವಿದ್ಯಾವಲ್ಲಭ ತೀರ್ಥ ಶ್ರೀಪಾದರು 'ಶ್ರೀ ಸುಖತೀರ್ಥಾನುಗ್ರಹ ಪ್ರಶಸ್ತಿ' ನೀಡಿ ಗೌರವಿಸಿದರು.
ಉಡುಪಿಯ ಡಾ. ಬಿ.ಗೋಪಾಲ ಆಚಾರ್ಯ ಅವರಿಗೆ ವಿದ್ಯಾವಲ್ಲಭ ತೀರ್ಥ ಶ್ರೀಪಾದರು 'ಶ್ರೀ ಸುಖತೀರ್ಥಾನುಗ್ರಹ ಪ್ರಶಸ್ತಿ' ನೀಡಿ ಗೌರವಿಸಿದರು.
Published on: 

* ಕಾಣಿಯೂರು ಶ್ರೀಗಳಿಂದ ಪ್ರದಾನ

ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯರ ಜನ್ಮಭೂಮಿಯಾದ ಪವಿತ್ರ ಪಾಜಕ ಕ್ಷೇತ್ರದಲ್ಲಿ ಶ್ರೀ ಮಧ್ವ ಜಯಂತಿಯ ನಿಮಿತ್ತ ಐದು ದಿನಗಳ ಕಾಲ ಸರ್ವಮೂಲ ಗ್ರಂಥಗಳ ಸಮಗ್ರ ಪಾರಾಯಣ ನಡೆಯಿತು.

ಪಾರಾಯಣದ ಮಂಗಳ ಮತ್ತು 108 ಜನರಿಂದ ಸುಮಧ್ವವಿಜಯ ಪಾರಾಯಣದ ನಿಮಿತ್ತ ನಡೆದ ಸಭೆಯಲ್ಲಿ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಸಾಧಕರಿಗೆ 'ಶ್ರೀ ಸುಖತೀರ್ಥಾನುಗ್ರಹ ಪ್ರಶಸ್ತಿ' ಪ್ರದಾನಿಸಿದರು.

ಉಡುಪಿಯ ಡಾ. ಬಿ.ಗೋಪಾಲ ಆಚಾರ್ಯ, ಮುಂಬಯಿ ಸತ್ಯಧ್ಯಾನ ವಿದ್ಯಾಪೀಠದ ವಿದ್ವಾಂಸ ರಾಮಕೃಷ್ಣ ಆಚಾರ್ಯ, ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಉಪನ್ಯಾಸಕರಾದ ವಿದ್ವಾನ್​ ಸತ್ಯನಾರಾಯಣ ರಾವ್, ವಿದ್ವಾನ್​ ಆನಂದ ತೀರ್ಥಾಚಾರ ಮಠದ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಸಭಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ವಿದ್ವಾಂಸ ಪ್ರೊ. ಪ್ರಭಂಜನ ಆಚಾರ್ಯ ಮತ್ತು ಅನೇಕ ವಿದ್ವಾಂಸರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net