ಮಾನವೀಯ ಮೌಲ್ಯ ಬೆಳೆಸುವಲ್ಲಿ ಎನ್​ಎಸ್​ಎಸ್​ ಪ್ರೇರಕ

ಉಡುಪಿಯ ಡಯಟ್​ ನಲ್ಲಿ ಆಯೋಜಿಸಿದ್ದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್​ನ ಎನ್​ಎಸ್​ಎಸ್​ ಶಿಬಿರವನ್ನು ನಿರುಪಮಾ ಪ್ರಸಾದ್​ ಶೆಟ್ಟಿ ಉದ್ಘಾಟಿಸಿದರು. ಡಾ. ಅಶೋಕ್​ ಕಾಮತ್​, ಜಗದೀಶ್​ ಕುಮಾರ್​, ದಿನೇಶ್​ ಹಿಂಬಾಳೆ, ಇಂದಿರಾ, ಶುಭಗೀತಾ ಇತರರಿದ್ದರು.
ಉಡುಪಿಯ ಡಯಟ್​ ನಲ್ಲಿ ಆಯೋಜಿಸಿದ್ದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್​ನ ಎನ್​ಎಸ್​ಎಸ್​ ಶಿಬಿರವನ್ನು ನಿರುಪಮಾ ಪ್ರಸಾದ್​ ಶೆಟ್ಟಿ ಉದ್ಘಾಟಿಸಿದರು. ಡಾ. ಅಶೋಕ್​ ಕಾಮತ್​, ಜಗದೀಶ್​ ಕುಮಾರ್​, ದಿನೇಶ್​ ಹಿಂಬಾಳೆ, ಇಂದಿರಾ, ಶುಭಗೀತಾ ಇತರರಿದ್ದರು.
Published on: 

* ನಿರುಪಮಾ ಪ್ರಸಾದ್​ ಶೆಟ್ಟಿ ಅಭಿಪ್ರಾಯ

* ಉಡುಪಿ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜ್​ನ ಶಿಬಿರ ಉದ್ಘಾಟನೆ

ಉಡುಪಿ: ಇಂದಿನ ಯುವಸಮುದಾಯ ಮೊಬೈಲ್​ ಗೀಳಿನಿಂದ ಹೊರಬಂದು ತಮ್ಮದೇ ಆದ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾದ ಅಗತ್ಯತೆ ಇದೆ. ವಿದ್ಯಾರ್ಥಿಗಳಲ್ಲಿ ಸಮಯಪಾಲನೆ, ಶಿಸ್ತು, ಕರ್ತವ್ಯಪ್ರಜ್ಞೆ ಹಾಗೂ ಮಾನವೀಯ ಮೌಲ್ಯ ಗಟ್ಟಿಗೊಳಿಸುವಲ್ಲಿ ಎನ್​ಎಸ್​ಎಸ್​ನ ಪಾತ್ರ ಪ್ರೇರಕವಾಗಿದೆ ಎಂದು ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್​ನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ನಿರುಪಮಾ ಪ್ರಸಾದ್​ ಶೆಟ್ಟಿ ಅಭಿಪ್ರಾಯ ಪಟ್ಟರು.

ಉಡುಪಿ ಜಿಲ್ಲಾ ತರಬೇತಿ ಮತ್ತು ಶಿಕ್ಷಣ ಸಂಸ್ಥೆ (ಡಯಟ್​)ಯಲ್ಲಿ ಹಮ್ಮಿಕೊಂಡಿದ್ದ ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್​ನ ಎನ್​ಎಸ್​ಎಸ್​ ಘಟಕದ ವಾರ್ಷಿಕ ವಿಶೇಫಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಡಯಟ್​ ಪ್ರಾಂಶುಪಾಲ ಡಾ. ಅಶೋಕ್​ ಕಾಮತ್​ ಮಾತನಾಡಿದರು.
ಡಯಟ್​ ಪ್ರಾಂಶುಪಾಲ ಡಾ. ಅಶೋಕ್​ ಕಾಮತ್​ ಮಾತನಾಡಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್​)ಯ ಪ್ರಾಂಶುಪಾಲ ಡಾ. ಅಶೋಕ್​ ಕಾಮತ್​ ಮಾತನಾಡಿ, ಸ್ವಚ್ಛತೆ ಕಾಪಾಡಿಕೊಳ್ಳುವುದು ನಿರಂತರವಾಗಿರಬೇಕು, ಸ್ವಚ್ಛತೆ ಹೊರಗಫಿ್ಟೇ ಅಲ್ಲ, ನಮ್ಮ ಮನಸ್ಸಿನೊಳಗೂ ಇರಬೇಕು. ಅದಕ್ಕಾಗಿ ಯುವಜನತೆ ಜಾತಿ, ಮತ, ಭೇದ-ಭಾವ ಮರೆತು ಒಟ್ಟಾಗಿರಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜ್​ನ ಪ್ರಾಂಶುಪಾಲ ಜಗದೀಶ್​ ಕುಮಾರ್​ ಮಾತನಾಡಿ, ಎನ್​ಎಸ್​ಎಸ್​ ಶಿಬಿರವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಪರಿಣಾಮಕಾರಿ ವೇದಿಕೆಯಾಗಿದೆ ಇಂತಹ ಚಟುವಟಿಕೆಗಳಿಂದ ಯುವಶಕ್ತಿ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.

ಕಾಲೇಜ್​ ಅಭಿವೃದ್ಧಿ ಸಮಿತಿಯ ಸದಸ್ಯ ದಿನೇಶ್​ ಹಿಂಬಾಳೆ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಇಂದಿರಾ ಮಾತನಾಡಿದರು.

ಕಾಲೇಜ್​ನ ಹಿರಿಯ ಉಪನ್ಯಾಸಕಿ ಡಾ. ಉಷಾ , ಡಯಟ್​ನ ಹಿರಿಯ ಉಪನ್ಯಾಸಕ ಸುರೇಂದ್ರ, ಕಾಲೇಜ್​ ಅಭಿವೃದ್ಧಿ ಸಮಿತಿಯ ಸದಸ್ಯೆ ಶ್ರೀಲತಾ, ಎನ್​ಎಸ್​ಎಸ್​ ಸಹಶಿಬಿರಾಧಿಕಾರಿ ಛಾಯಾ ಶೆಟ್ಟಿ, ಎನ್​ಎಸ್​ಎಸ್​ನ ನಾಯಕಿ ವಿಜೇತಾ, ಉಪನಾಯಕಿ ಪ್ರತಿಭಾ, ಕಾಲೇಜ್​ನ ಉಪನ್ಯಾಸಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಎನ್​ಎಸ್​ಎಸ್​ ಗೀತೆ ಹಾಡಿದರು. ಎನ್​ಎಸ್​ಎಸ್​ ಕಾರ್ಯಕ್ರಮಾಧಿಕಾರಿ ಶುಭಗೀತಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕ ಗಂಗಾಧರ್​ ವಿ.ಎ. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಪ್ರೇಮಾ ಬಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net