

ಕೋಟ: ಸಹಕಾರ ಸಂಘಗಳ ಸಾಲ ವಸೂಲಿ ಬಗ್ಗೆ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 103ರಲ್ಲಿ ತಿಳಿಸಿದ ಪ್ರಕಾರ ಸಾಲಗಾರರ ಸ್ಥಿರಾಸ್ಥಿಯನ್ನು ಮುಟ್ಟುಗೋಲು ಹಾಕುವ ನ್ಯಾಯಾಲಯದ ಆದೇಶವನ್ನು ಪಹಣಿ ಪತ್ರದ 11ನೇ ರಿಖಾನೆಯಲ್ಲಿ ದಾಖಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದುವರೆಗೆ ಸಹಕಾರಿ ಸಂಘಗಗಳ ಮುಟುಗೋಲು ಆದೇಶವನ್ನು ಉಡುಪಿ ಮತ್ತು ಕುಂದಾಪುರ ತಾಲೂಕುಗಳ ಕಂದಾಯ ಇಲಾಖೆಯು ಪಹಣಿ ಪತ್ರದಲ್ಲಿ ದಾಖಲಿಸಲು ನಿರಾಕರಿಸಲಾಗುತ್ತಿತ್ತು. ಈ ಬಗ್ಗೆ ಸಾಲಿಗ್ರಾಮದ ಶ್ರೀ ಗುರುನರಸಿಂಹ ವಿವಿಧೋದ್ಧೇಶ ಸೌಹಾರ್ದ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರು ಸತತ ಪ್ರಯತ್ನ ನಡೆಸಿದ್ದು, ಕೊನೆಗೂ ಯಶಸ್ಸು ದೊರೆತಿದೆ.