ಕರೊನಾ ಕ್ವಾರಂಟೈನ್​ಗೆ ಮನನೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

SSLC Student
Published on

ಉಡುಪಿ: ಕರೊನಾ ಕ್ವಾರಂಟೈನ್​ ವಿಚಾರವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಾಲಿಗ್ರಾಮದ ಮಾಣಿಕಟ್ಟಿನಲ್ಲಿ ಮಂಗಳವಾರ ನಡೆದಿದೆ.

ಕಾರ್ತಿಕ ( 15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಕೋಟ ವಿವೇಕ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ. ಇತ್ತೀಚಿಗೆ ತಾಯಿ ಮನೆಗೆಲಸ ಮಾಡಿಕೊಂಡಿದ್ದ ಮನೆಯಲ್ಲಿ ಕರೊನಾ ಸೋಂಕು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ತಾಯಿ ರುದ್ರಮ್ಮ ಮತ್ತು ಮಗನಿಗೆ ಹೋಂ ಕ್ವಾರಂಟೈನ್ ಹಾಕಲಾಗಿತ್ತು.

ಇದೇ ವಿಚಾರವಾಗಿ ತುಂಬಾ ದುಃಖದಲ್ಲಿದ್ದ ಕಾರ್ತಿಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮೃತನ ಕೊವೀಡ್ ವರದಿ ಬಂದ ಬಳಿಕ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net