

ಉಡುಪಿ: ಲಾಕ್ಡೌನ್ನಿಂದ ಆಲ್ಕೋಹಾಲ್ ಸಿಗದಿದ್ದಕ್ಕೆ ಮನನೊಂದು ಕಳೆದ ಐದು ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರತ್ಯಕೇವಾಗಿ ಆರು ಮಂದಿ ಸರಣಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಮಾ.26 ರಂದು ಕಾರ್ಕಳದ ತೆಳ್ಳಾರು ಗ್ರಾಮದ ನಾಗೇಶ್ ಆಚಾರ್ಯ (37) ಮತ್ತು ಉದ್ಯಾವರ ಗ್ರಾಮದ ಗಣೇಶ(42), ಮಾ.28 ರಂದು ಕಾಪು ತಾಲೂಕಿನ ಪಡು ಗ್ರಾಮದ ಶಶಿಧರ ಸುವರ್ಣ (46) ಮತ್ತು ಕುಂದಾಪುರ ತಾಲೂಕಿನ ಹೆಮ್ನಾಡಿಯ ರಾಘವೇಂದ್ರ (37) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾ.26 ರಂದು ಕಾರ್ಕಳ ತಾಲೂಕು ವರಂಗ ಗ್ರಾಮದ ಅರವಿಂದ (37) ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಮಾ. 24ರಂದು ಬೆಳ್ಳಂಪಳ್ಳಿ ಗ್ರಾಮ ಕುಕ್ಕಿಕಟ್ಟೆಯಲ್ಲಿ ವಾಲ್ಟರ್ ಡಿಸೋಜ(57) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಮಾಡಿಕೊಂಡವರೆಲ್ಲಾ ವಿಪರೀತ ಮದ್ಯಪಾನದ ಚಟ ಹೊಂದಿದ್ದರು ಎಂದು ತಿಳಿದುಬಂದಿದೆ. ಕರೊನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಇಡೀ ರಾಷ್ಟ್ರಕ್ಕೆ ಲಾಕ್ಡೌನ್ ಹೇರಲಾಗಿದೆ. ಹೀಗಾಗಿ ವೈನ್ಸ್ಟೋರ್ಗಳು ಎಲ್ಲಡೆ ಮುಚ್ಚಿದ್ದು, ಪ್ರತಿನಿತ್ಯ ಮದ್ಯಪಾನ ಮಾಡುತ್ತಿರದ್ದವರಿಗೆ ನಿರಾಶೆಯಾಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. (ದಿಗ್ವಿಜಯ ನ್ಯೂಸ್)