ಉಡಿ ತುಂಬುವ ಕಾರ್ಯಕ್ರಮ ಇಂದು

Published on

ಉಡಿ ತುಂಬುವ ಕಾರ್ಯಕ್ರಮ ಇಂದು

ಬೆಲಹೊಂಗಲ: ತಾಲೂಕಿನ ಯರಡಾಲ ಗ್ರಾಮದ ಗ್ರಾಮದೇವಿ ದೇಮವ್ವ ದೇವಿಗೆ ಏ.1ರಂದು 10 ಗಂಟೆಗೆ ಗ್ರಾಮಸ್ಥರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಗ್ರಾಮದೇವಿ ಜಾತ್ರಾ ಮಹೋತ್ಸವ ಕಮಿಟಿ ಅಧ್ಯ ಚಂದ್ರಗೌಡ ಪಾಟೀಲ ಅವರ ನೇತತ್ವದಲ್ಲಿ ಎಲ್ಲ ಧಾರ್ಮಿಕ ವಿಧಿ&ವಿಧಾನಗಳು ನಡೆಯಲಿವೆ. ಗ್ರಾಮದ ವಿವಿಧ ದೇವರುಗಳಿಗೆ ವಿಶೇಷ ಪೂಜೆ, ಪ್ರಾರ್ಥನೆ, ಮಂತ್ರ, ಪಠಣಗಳು ಜರುಗಲಿದ್ದು, ಇದೇ ಸಂದರ್ಭದಲ್ಲಿ ಮುತೆದೆಯರಿಗೂ ಉಡಿ ತುಂಬಲಾಗುವುದು. ನಂತರ ಅನ್ನ ಪ್ರಸಾದ ನೆರವೇರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net