

ಬೆಂಗಳೂರು: ಉದಯಭಾನು ಕಲಾ ಸಂಘವು ತನ್ನ ವಜ್ರ ಮಹೋತ್ಸವದ ಆಚರಣೆ ಅಂಗವಾಗಿ ಸಂಗೀತ, ಕೌಶಲ ತರಬೇತಿ, ಉಪನ್ಯಾಸ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
7 ವರ್ಷ ಮೇಲ್ಪಟ್ಟ ಸಂಗೀತದಲ್ಲಿ ಆಸಕ್ತಿ ಇರುವವರಿಗಾಗಿ ಜೂ. 1ರಿಂದ 8ರವರೆಗೆ ಮುಂಗಾರು ಸಂಗೀತ ರಸಗ್ರಹಣ ಉಚಿತ ಶಿಬಿರ ಏರ್ಪಡಿಸಲಾಗಿದೆ. ಜೊತೆಗೆ ಭರತನಾಟ್ಯ, ಚಿತ್ರಕಲೆ, ಸುಗಮ ಸಂಗೀತ, ಕೀಬೋರ್ಡ್, ತಬಲ, ಕೊಳಲು, ಕರ್ನಾಟಕ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ತರಗತಿಗಳನ್ನು ನಡೆಸಲಿದೆ. ಜೂ. 1ರಿಂದ ಸ್ವಯಂಉದ್ಯೋಗ ಕೌಶಲ ಅಭಿವೃದ್ಧಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬೇಸಿಕ್ ತರಗತಿಗಳು ಮತ್ತು ವಾಣಿಜ್ಯ ತರಗತಿಯ ವಿದ್ಯಾರ್ಥಿಗಳಿಗೆ ಟ್ಯಾಲಿ+ ಟಿಡಿಎಸ್+ ಜಿಎಸ್‌ಟಿ ಅಕೌಂಟಿಂಗ್ ತರಬೇತಿ ಆಯೋಜಿಸಿದೆ.
ಜುಲೈ ಮೊದಲ ವಾರದಲ್ಲಿ ಪೂರಕ ಶಿಕ್ಷಣದ ಅಗತ್ಯವಿರುವ ಎಸ್‌ಎಸ್‌ಎಲ್ಸಿ, ಪಿಯುಸಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಉಪನ್ಯಾಸ ತರಗತಿ ಆರಂಭಿಸಲಿದೆ. ಆಸಕ್ತರು ಸಂಘದ ಕಚೇರಿಯಲ್ಲಿ ಅರ್ಜಿ ಪಡೆದು ಹೆಸರು ನೋಂದಾಯಿಸಬೇಕು. ವಿವರಕ್ಕೆ ದೂ: 080- 2660 1831, 2660 9343 ಸಂಪರ್ಕಿಸಿ. ವಾಟ್ಸ್‌ಆ್ಯಪ್: 98441 92952.