

ಕುರುಗೋಡು: ಕೆಲಸಕ್ಕೆ ಹಾಜರಾದವರಿಗೆ ಮಾತ್ರ ಎನ್‌ಎಂಎಂಎಸ್ ಮೂಲಕ ಹಾಜರಾತಿ ಹಾಕಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಬ್ಬಂದಿಗೆ ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ ಎಚ್ಚರಿಸಿದರು.
ಇದನ್ನೂ ಓದಿ: ಹಾಜರಾತಿ ತುಂಬ ಕಡಿಮೆ
ತಾಲೂಕಿನ ಯರಂಗಳಿಗಿ ಗ್ರಾಪಂ ವ್ಯಾಪ್ತಿ ನೆರೇಗಾ ಪ್ರಗತಿ ಹಂತದ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶುಕ್ರವಾರ ಮಾತನಾಡಿದರು.
ಮನರೇಗಾ ಯೋಜನೆಯಡಿ ಕೂಲಿ ಮೊತ್ತ 370 ರೂ.ಗೆ ಏರಿಕೆ ಮಾಡಲಾಗಿದ್ದು, ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ಪಡೆಯಬೇಕು.
ಅಳತೆ ತಕ್ಕಂತೆ ಕೆಲಸ ನಿರ್ವಹಿಸಬೇಕು. ಸಿಬ್ಬಂದಿ ಅಕ್ರಮದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರತಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದರು. ತಾಪಂ ಇಒ ನಿರ್ಮಲಾ, ಅಧಿಕಾರಿಗಳಾದ ಅಂಬರೀಶ್, ಶಿವಪ್ರಸಾದ್ ರೆಡ್ಡಿ, ಪರುಶುರಾಮ್ ಇತರರಿದ್ದರು.