ಹಾಜರಾತಿ ತುಂಬ ಕಡಿಮೆ

Untitled design (14)
Published on

ಕಂಪ್ಲಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭ ನಿಮಿತ್ತ ಗುರುವಾರ ಶಾಲೆಗೆ ಮಕ್ಕಳು ಸಂಭ್ರಮದಿಂದ ಆಗಮಿಸಿದರು. ಶಾಲೆ ದ್ವಾರಕ್ಕೆ ತಳಿರು ತೋರಣ, ಬಾಳೆಗೊನೆ ಕಟ್ಟಿ ಸಿಂಗರಿಸಲಾಗಿತ್ತು. ಶಾಲೆ ದ್ವಾರದಲ್ಲಿಯೇ ಮಕ್ಕಳಿಗೆ ಸಿಹಿ, ಗುಲಾಬಿ ಹೂ, ಪಠ್ಯಪುಸ್ತಕಗಳನ್ನು ನೀಡಿ ಬರಮಾಡಿಕೊಳ್ಳಲಾಯಿತು.

ಶಾಲಾರಂಭದ ದಿನ ಆಗಮಿಸಿದ ಮಕ್ಕಳನ್ನು ಮುಖ್ಯಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಸ್ವಾಗತಿಸಿದರು. ಸತ್ಯನಾರಾಯಣಪೇಟೆಯ ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ಎಸ್.ಹನುಮನಗೌಡ ಮಾತನಾಡಿ, ಶಾಲಾರಂಭದ ಮೊದಲ ದಿನ ಕೆಲ ಮಕ್ಕಳು ಮಾತ್ರ ಆಗಮಿಸಿದ್ದಾರೆ. ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ, ಸಿಹಿಯೊಂದಿಗೆ ಬಿಸಿಯೂಟ ನೀಡಲಾಗಿದೆ ಎಂದರು. ಸಹಶಿಕ್ಷಕರಾದ ಡಿ.ಖಲೀಲ್, ಆರ್.ವಿರೂಪಾಕ್ಷಪ್ಪ, ಜಿ.ಪಂಪಯ್ಯ, ಎನ್.ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net