

ಕಲಬುರಗಿ ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಅವರೊಂದಿಗೆ ಕೃತ್ಯಗಲ್ಲಿ ಶಾಮೀಲಾಗಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಸಹ ವಶಕ್ಕೆ ತೆಗೆದುಕೊಂಡು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.
ರಾಹುಲ್ ಆನಂದ (೨೮) ಮತತ್ತು ಕಾರ್ತಿಕ ಕೃಷ್ಣಾ ಬಂಧಿತರು.
ಡಾ.ಅAಬೇಡ್ಕರ್ ಕಾಲೇಜಿನಲ್ಲಿ ಈಚೆಗೆ ಬಾಗಿಲು ಮುರಿದು ಸಾಮಾನುಗಳನ್ನು ಕಳವು ಮಾಡಿದ್ದರು. ಮಾಹಿತಿಯಂತೆ ಇನ್‌ಸ್ಪೆಕ್ಟರ್ ಸಚಿನ ಚಲುವಾದಿ ಮತ್ತು ಸಿಬ್ಬಂದಿ ಕೇಸುರಾಯ, ಶಿವಪ್ರಕಾಶ ಇತರರು ಕೂಡಿಕೊಂಡು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.