ಒಂದೇ ಅಂಗನವಾಡಿ ಕೇಂದ್ರಕ್ಕೆ ಇಬ್ಬರು ನೇಮಕ !

IMG-20230907-WA0026
Published on

ಪ್ರಜಾ ಪರಿವರ್ತನ ವೇದಿಕೆ ರಾಜ್ಯ ಕಾರ್ಯದರ್ಶಿ ಪ್ರಕಾಶ ಹಾಗರಗಿ ಆರೋಪ
ವಿಜಯವಾಣಿ ಸುದ್ದಿಜಾಲ ಕಲಬುರಗಿ

ಒಂದೇ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತರನ್ನು ಇಬ್ಬರನ್ನು ನೇಮಕ ಮಾಡಿರುವ ನಗರ ಸಿಡಿಪಿಒ ಹಾಗೂ ಪ್ರಥಮ ದರ್ಜೆ ಸಹಾಯಕಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರಜಾ ಪರಿವರ್ತನ ವೇದಿಕೆ ರಾಜ್ಯ ಕಾರ್ಯದರ್ಶಿ ಪ್ರಕಾಶ ಹಾಗರಗಿ ಆಗ್ರಹಿಸಿದರು.

• ನಗರ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದಗೆ ಅರ್ಹ ಸಹಾಯಕಿಯರನ್ನು ಪದನೋನ್ನತಿ ನೀಡಿದ್ದು, ಮೊದಲನೇ ಆದೇಶ ಪಟ್ಟಿಯಲ್ಲಿ ಲತಾ ಪುಂಡಲೀಕರಾವ ಇವರು ಸ್ವಾದಿಗಲ್ಲಿ ಅಂಗನವಾಡಿ ಕೇಂದ್ರದಿಂದ ಪಿಪಿಸಿಎ ವಲಯದಲ್ಲಿ ಬರುವ ಸರಸ್ವತಿಪುರ ಅಂಗನವಾಡಿ ಕೇಂದ್ರಕ್ಕೆ ಪದೋನ್ನತಿ ಮಾಡಿ ಆದೇಶ ಮಾಡಿರುತ್ತಾರೆ. ಅದರಂತೆ ಅವರು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

• ಅದೇ ಎರಡನೇ ಆದೇಶದಲ್ಲಿ ರೇಖಾ ಗೋವಿಂದ ಇವರು ಪಿಪಿಸಿಎ ವಲಯದ ಪ್ರಶಾಂತ ನಗರ (ಬಿ) ಅಂಗನವಾಡಿ ಕೇಂದ್ರಕ್ಕೆ ಸಹಾಯಕಿಯಾಗಿದ್ದು, ಇವರನ್ನು ಸಹ ಸರಸ್ವತಿ ಅಂಗನವಾಡಿ ಕೇಂದ್ರಕ್ಕೆ ಎರಡನೇ ಆದೇಶದಲ್ಲಿ ಪದೋನ್ನತಿ ನೀಡಿರುತ್ತಾರೆ ಎಂದು ದೂರಿದರು.

• ಉಪನಿರ್ದೇಶಕರ ೨೯-೩-೨೦೨೩ರ ಆದೇಶದಂತೆ ಸುಜಾತಾ ಕಿಶನರಾವ ಲಿಂಗದ ಗುಡಿ ಕೇಂದ್ರದಲ್ಲಿ ಸಹಾಯಕಿಯಾಗಿದ್ದು, ಇವರನ್ನು ಇಲ್ಲಿಂದ ಬುಡ್ಗ ಜಂಗಮ ಅಂಗನವಾಡಿ ಕೇಂದ್ರಕ್ಕೆ ಪದೋನ್ನತಿ ನೀಡಿ ಮತ್ತೆ ಆದೇಶ ನೀಡಿರುತ್ತಾರೆ. ಅದರಂತೆ ಸುಜಾತಾ ಅಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ ಎಂದು ಹೇಳಿದರು.

• ಮೇಲಿನ ಈ ವಿವರಗಳ ಅನ್ವಯ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿ ಉಳಿದ ಅಭ್ಯರ್ಥಿಗಳಿಂದ ಹಣ ಪಡೆದು ಒಂದೇ ಅಂಗನವಾಡಿ ಕೇಂದ್ರಕ್ಕೆ ಇಬ್ಬರನ್ನೂ ಆಯ್ಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಆರೋಪಿಸಿದರು.

• ಹೀಗಾಗಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಉಪನಿರ್ದೇಶಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಮೇಶ ಬೆಳಕೋಟಾ, ನಿಂಗಪ್ಪ ಬಿ. ಪ್ರಬುದ್ಧಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net