

ತುಮಕೂರು: ಜಿಲ್ಲೆಯಲ್ಲಿ ಮತ್ತೆರಡು ರೈಲ್ವೆ ಅಂಡರ್ ಪಾಸ್ ಮತ್ತು ರೈಲ್ವೆ ಮೇಲ್ಸೇತುವೆಯನ್ನು ರೈಲ್ವೆ ಇಲಾಖೆ ಮಂಜೂರು ಮಾಡಿದೆ. ಒಟ್ಟು 60 ಕೋಟಿ ರೂ., ವೆಚ್ಚದ ಕಾಮಗಾರಿಗಳು ಜಿಲ್ಲೆಗೆ ಮಂಜೂರು ಮಾಡಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಗುಬ್ಬಿ ತಾಲೂಕು ಕಳ್ಳೀಪಾಳ್ಯ ರೋಡ್& ಅಂಡರ್ ಪಾಸ್ (ಎಲ್ಸಿ 48) 13.44 ಕೋಟಿ ರೂ.,, ಬೆಂಚಗೆರೆ ಗೇಟ್ & ರೈಲ್ವೇ ಮೇಲ್ಸೇತುವೆ (ಎಲ್ಸಿ 56) 36.62 ಕೋ. ರೂ., ಹಾಗೂ ಬಂಡಿಹಳ್ಳಿ ರೋಡ್ ಗೇಟ್ & ಅಂಡರ್ ಪಾಸ್ (ಎಲ್ಸಿ 60) 10.01 ಕೋ ರೂ., ಮೊತ್ತದ್ದಾಗಿದೆ. ಈ ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ರೇಲ್ವೇ ಇಲಾಖೆ ಭರಿಸಲಿದೆ.
5 ಆರ್ಒಬಿ: ಈಗಾಗಲೇ 350 ಕೋಟಿ ರೂ., ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆಯನ್ನು ರೈಲ್ವೆ ಇಲಾಖೆಯಿಂದ ಮಂಜೂರು ಮಾಡಿದೆ. ನಗರದ ಬಟವಾಡಿ, ಬಡ್ಡಿಹಳ್ಳಿ , ಮೈದಾನ, ಅರೆಯೂರಿನ ಮಲ್ಲಸಂದ್ರ ಗೇಟ್ ಹಾಗೂ ನಿಟ್ಟೂರು ರೈಲ್ವೆ ನಿಲ್ದಾಣದ ಬಳಿ ತುಮಕೂರು&ಮೈಸೂರು ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮಂಜೂರು ಮಾಡಲಾಗಿದೆ. ಇತ್ತೀಚೆಗೆ ಸ್ಥಳಕ್ಕೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಸಚಿವ ಸೋಮಣ್ಣ ಪರಿಶೀಲಿಸಿದ್ದರು. ಅಲ್ಲದೆ, ಈ ಕಾಮಗಾರಿ ಪ್ರಾರಂಭಿಸಲು ಶೀಘ್ರವಾಗಿ ಸೂಕ್ತ ಕ್ರಮನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದರು.
ಕೇವಲ 3 ತಿಂಗಳ ಅವಧಿಯಲ್ಲಿ ತುಮಕೂರು ಜಿಲ್ಲೆಗೆ 410 ಕೋಟಿ ರೂ., ಮೊತ್ತದ ಒಟ್ಟು 8 ಕಾಮಗಾರಿಗಳಿಗೆ ( 6 ಆರ್ ಒಬಿ, 2 ಆರ್ಯುಬಿ) ರೈಲ್ವೆ ಇಲಾಖೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇವಲ 3 ತಿಂಗಳ ಅವಧಿಯಲ್ಲಿ ಜಿಲ್ಲೆಗೆ ಒಟ್ಟು 8 ಕಾಮಗಾರಿಗಳಿಗೆ 410 ಕೋಟಿ ರೂ.,ಗಳನ್ನು ರೈಲ್ವೆ ಇಲಾಖೆ ನೀಡಿದೆ. ಜನರ ಅಗತ್ಯತೆಗಳಿಗೆ ಸ್ಪಂದಿಸುತ್ತಿರುವ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ತರುತ್ತಿರುವುದಕ್ಕೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೇ ಸಲ್ಲಿಸುತ್ತೇನೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ