ಒಂದೇ ರಾತ್ರಿಯಲ್ಲಿ ಇಬ್ಬರು ಪೊಲೀಸರ ಸಾವು: ಕಾರಣ ಇಲ್ಲಿದೆ

police
Published on

ಬೆಳಗಾವಿ: ಒಂದೇ ರಾತ್ರಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸುರೇಶ್ ಆರ್ ತಹಶಿಲ್ದಾರ ಮತ್ತು ದುಂಡಪ್ಪ ಮಗದೂಮ್ ಮೃತ ಪೊಲೀಸರು. ಈ ಇಬ್ಬರು ಹಲವು ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸಶಸ್ತ್ರ ಮೀಸಲು ಉಪ ನಿರೀಕ್ಷಕ ಸುರೇಶ್ ಅವರು​​ ಲಿವರ್ ತೊಂದರೆಯಿಂದ ಬಳಲುತ್ತಿದ್ದರೆ, ಸಶಸ್ತ್ರ ಪಡೆಯ ಮುಖ್ಯ ಪೇದೆ ದುಂಡಪ್ಪ ಮಗದೂಮ್​ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಇದಕ್ಕಾಗಿ ಹಲವು ದಿನಗಳಿಂದ ಬೆಳಗಾವಿ ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೇ ದುರದೃಷ್ಟವಶಾತ್​ ಬೆಳಗಾವಿಯಲ್ಲಿ ಒಂದೇ ರಾತ್ರಿಯಲ್ಲಿ ಈ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ. ಮೃತರಿಗೆ ಸಹೋದ್ಯೋಗಿಗಳು ಹಾಗೂ ಬೆಳಗಾವಿ ಎಸ್​ಪಿ ಸಂಜೀವ್​ ಪಾಟೀಲ್​ ಸೇರಿದಂತೆ ಹಿರಿಯ ಅಧಿಕಾರಿಗಳು ಸಂತಪಾ ಸೂಚಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net