ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಪೊಲೀಸ್ ಶವ ಪತ್ತೆ; ಇನ್ನೊಬ್ಬ ಪೇದೆಗಾಗಿ ಹುಡುಕಾಟ..

Police
Published on

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ತೊಂಡಿಹಾಳ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಪೇದಗಳಿಬ್ಬರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಶವವಾಗಿ ಸಿಕ್ಕ ಪೇದೆಯನ್ನು ಮುಂಡರಗಿ ತಾಲೂಕಿನ ನಾಗರಳ್ಳಿ ಗ್ರಾಮದ ನಿಂಗಪ್ಪ ಹಲವಾಗಲಿ ಎಂದು ಗುರುತಿಸಲಾಗಿದೆ.

ಇವರು ಸಹೋದ್ಯೋಗಿ ಮಹೇಶ ಎಂಬಾತನೊಂದಿಗೆ ಗಜೇಂದ್ರಗಡದಲ್ಲಿ ಗಣೇಶ ಚತುರ್ಥಿಯ ಬಂದೋಬಸ್ತ್​​ಗೆ ತೆರಳಿದ್ದರು. ಸೋಮವಾರ ಕರ್ತವ್ಯ ಮುಗಿಸಿ ವಾಪಸ್ ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಇಬ್ಬರು ಪೇದೆಗಳ ಮೊಬೈಲ್​ಫೋನ್​ ಜಿಪಿಎಸ್ ಲೊಕೇಷನ್ ಹಳ್ಳದ ಬಳಿ ತೋರಿಸಿದ ಕಾರಣ ನೀರಿನಲ್ಲಿ ಕೊಚ್ಚಿ ಹೋದ ಶಂಕೆ ವ್ಯಕ್ತವಾಗಿತ್ತು. ಇದೇ ಸುಳಿವು ಹಿಡಿದುಕೊಂಡ ಪೊಲೀಸರು ಅಗ್ನಿಶಾಮಕದಳ ಸಿಬ್ಬಂದಿಯೊಂದಿಗೆ ಹಳ್ಳದಲ್ಲಿ ಪೇದೆಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪೊಲೀಸರ ಅನುಮಾನ ನಿಜವಾಗಿದ್ದು, ನಿಂಗಪ್ಪ ಮೃತದೇಹ ಪತ್ತೆಯಾಗಿದೆ. ಸೇತುವೆಯಿಂದ ನಾಲ್ಕು ಕಿ.ಮೀ. ದೂರದಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಕುಟುಂಬದವರು ಆಗಮಿಸಿದ್ದು, ಇನ್ನೊಬ್ಬ ಪೇದೆ ಮಹೇಶ್​ಗಾಗಿ ಹುಡುಕಾಟ ಮುಂದುವರಿದಿದೆ. ಸ್ಥಳಕ್ಕೆ ಗದಗ, ಕೊಪ್ಪಳ ಎಸ್ಪಿ ಸೇರಿದಂತೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net