ಇಬ್ಬರಿಗೆ ನೀರಲ್ಲೇ ಮರಣ: ಮೀನು ಹಿಡಿಯುತ್ತಿದ್ದವನಿಗೂ, ಈಜಲು ಹೋದವನಿಗೂ ಸಾವು..

Feature
Published on

ಉತ್ತರಕನ್ನಡ/ಬೀದರ್​: ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಲ್ಲಿ ಇಬ್ಬರು ಯುವಕರು ನೀರುಪಾಲಾಗಿ ಮೃತಪಟ್ಟಿದ್ದಾರೆ. ಒಂದು ಅನಾಹುತ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದ್ದರೆ ಇನ್ನೊಂದು ಬೀದರ್​ ಜಿಲ್ಲೆಯಲ್ಲಿ ಸಂಭವಿಸಿದೆ.

ಉತ್ತರಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಮಳಗಿಯ ನಾಗಿನಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಮುಂಡಗೋಡು ನಿವಾಸಿ ಉಮೇಶ ಬೋವಿವಡ್ಡರ್ (28) ಮೃತಪಟ್ಟಿದ್ದಾನೆ. ಮುಳುಗಿ ಕೆರೆಯಲ್ಲಿ ಸಿಲುಕಿದ್ದ ಈತನ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದು, ಮುಂಡಗೋಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ವಿದ್ಯಾರ್ಥಿ ಅಮೀತ ಬಿರಾದಾರ ( 18) ಎಂಬ ವಿದ್ಯಾರ್ಥಿ ನೀರುಪಾಲಾಗಿ ಸಾವಿಗೀಡಾಗಿದ್ದಾನೆ. ಈಜು ಬರದಿದ್ದರೂ ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net