More

    ಕಸದ ರಾಶಿ ಬಳಿ ಹಿರಿಯ ನಟಿ ಬಿ. ಜಯಾ ಶವ; ಅಸಲಿಗೆ ಅಲ್ಲಿ ನಡೆದಿದ್ದೇನು?

    ಬೆಂಗಳೂರು: ನಿನ್ನೆಯಷ್ಟೇ ನಿಧನರಾಗಿರುವ ಹಿರಿಯ ನಟಿ ಬಿ.ಜಯಾ ಅವರ ಶವವನ್ನು ರಸ್ತೆ ಬದಿ ಅದೂ ಕಸದ ರಾಶಿ ಹತ್ತಿರ ಇರಿಸಿ ಅವಮಾನಿಸಲಾಗಿದೆ. ಮಾತ್ರವಲ್ಲ, ಅವರ ಅಂತಿಮದರ್ಶನಕ್ಕೆ ಚಿತ್ರರಂಗದ ಗಣ್ಯರು ಬಂದಿರಲಿಲ್ಲ ಎಂದು ಆರೋಪಿಸಿರುವ ವಿಡಿಯೋವೊಂದು ವೈರಲ್​ ಆಗಿದೆ. ಇದರಲ್ಲಿ ಜಯಾ ಅವರ ಪಾರ್ಥಿವ ಶರೀರ ರಸ್ತೆಬದಿಯ ಕಸದ ರಾಶಿ ಹತ್ತಿರ ಇರುವುದು ಕಂಡುಬಂದಿದೆ.

    ಈ ವಿಡಿಯೋ ಶೇರ್ ಆಗುತ್ತಿದ್ದು, ಹಲವರು ಇದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದು, ಈ ವಿಡಿಯೋ ಸತ್ಯಾಸತ್ಯತೆ ಕುರಿತ ಸ್ಪಷ್ಟನೆ ಈಗ ಹೊರಬಿದ್ದಿದೆ. ಈ ವಿಡಿಯೋ ಕುರಿತು ಬಿ. ಜಯಾ ಅವರ ತಮ್ಮ, ನಿರ್ದೇಶಕ ಮಲ್ಲೇಶ್​ ಅವರ ಪುತ್ರಿ ವಿಡಿಯೋ ಮೂಲಕವೇ ಸ್ಪಷ್ಟೀಕರಣ ನೀಡಿದ್ದಾರೆ.

    ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ನಾವೇ ಅಂತಿಮ ದರ್ಶನಕ್ಕೆ ಯಾರೂ ಬರುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದೆವು. ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಯಾರೂ ಬರುವ ಹಾಗೆಯೂ ಇಲ್ಲ. ಇನ್ನು ಸ್ಮಶಾನದ ಬಳಿ ಹೊರಗೇ ಶವಕ್ಕೆ ಪೂಜೆ ಮಾಡಿ ಒಳಗೆ ತೆಗೆದುಕೊಂಡು ಹೋಗಬೇಕಿತ್ತು. ಅದು ನಮಗೆ ಮಾತ್ರವಲ್ಲ, ಎಲ್ಲರಿಗೂ ಅದೇ ಥರ ವ್ಯವಸ್ಥೆ ಎತ್ತು. ಎಲ್ಲರಿಗೆ ಹೇಗೆ ವ್ಯವಸ್ಥೆ ಮಾಡಲಾಗಿತ್ತೋ ಅದೇ ರೀತಿಯಲ್ಲೇ ನಾವೂ ಮಾಡಿದ್ದೆವು. ಆದರೆ ನಾವು ಹೆಚ್ಚಿನ ಜನರು ಸ್ಮಶಾನಕ್ಕೆ ಹೋಗಿರಲಿಲ್ಲ. ಈ ಮಧ್ಯೆ ಶವ ಹೊರಗೆ ರಸ್ತೆ ಬದಿಯಲ್ಲಿ ಇರಿಸಿದ್ದಾಗ ಹಾಗೂ ಯಾರೂ ಇಲ್ಲದ ಸಂದರ್ಭ ನೋಡಿ ಅದನ್ನು ವಿಡಿಯೋ ಮಾಡಿದ ಯಾರೋ ಅಪಪ್ರಚಾರ ಮಾಡಿದ್ದಾರೆ. ಅದನ್ನು ನಂಬಬೇಡಿ ಎಂದು ಅವರು ಕೋರಿಕೊಂಡಿದ್ದಾರೆ.

    ಇದನ್ನೂ ಓದಿ: ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ಇನ್ನು ಜಯಾ ಅವರಿಗೆ ಮೇ 29ರಿಂದ ಸ್ಟ್ರೋಕ್ ಆದಾಗಿಂದ ಎಲ್ಲರೂ ಚೆನ್ನಾಗಿಯೇ ನೋಡಿಕೊಂಡಿದ್ದೇವೆ. ಆಸ್ಪತ್ರೆಗೆ ಸೇರಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದೇವೆ. ಯಾರ್ಯಾರು ಹೇಳಿದ್ದರೋ ಆ ಚಿಕಿತ್ಸೆ ಎಲ್ಲ ಮಾಡಿಸಿದ್ದೇವೆ. ಅದಾಗ್ಯೂ ಹೀಗೆಲ್ಲ ಅಪಪ್ರಚಾರ ಮಾಡುವವರಿಗೆ ಏನು ಸಿಗುತ್ತದೋ ಗೊತ್ತಿಲ್ಲ. ಆದರೆ ನಮಗೆ ಇದರಿಂದ ತೀವ್ರ ನೋವುಂಟಾಗಿದೆ ಎಂದಿರುವ ಅವರು ವೈರಲ್ ಆಗಿರುವ ವಿಡಿಯೋದಲ್ಲಿ ಸತ್ಯಾಂಶವಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ.

    ಹಿರಿಯ ನಟಿ ಬಿ. ಜಯಾರ ಮೃತದೇಹವನ್ನ ಕಸದರಾಶಿ ಬಳಿ ಇಟ್ಟು ಅವಮಾನ! ವಿಡಿಯೋ ವೈರಲ್​

    ಕುಡಿದ ಮತ್ತಲ್ಲಿ ಮನೇಲಿ ಜಗಳವಾಡಿ ಮೊಬೈಲ್​ಫೋನ್​ ಟವರ್ ಏರಿದ; ಕೆಳಗಿಳಿಸಲು ನಡೆಯಿತು 2 ಗಂಟೆಗಳ ಕಾರ್ಯಾಚರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts