ನಡುರಸ್ತೆಯಲ್ಲೇ ಯುವಕನಿಗೆ ಮಾರಣಾಂತಿಕ ಹಲ್ಲೆ, ಬಿಡಿಸಲು ಬಂದವರಿಗೂ ಅವರಿಬ್ಬರು ಹೊಡೆದರು...

Featured
Published on

ಹಾಸನ: ಪುಡಿರೌಡಿಗಳಿಬ್ಬರು ಯುವಕನೊಬ್ಬನನ್ನು ನಡುರಸ್ತೆಯಲ್ಲೇ ಮಾರಣಾಂತಿಕವಾಗಿ ಥಳಿಸಿದ್ದು, ಜಗಳ ಬಿಡಿಸಲು ಬಂದಿದ್ದ ವ್ಯಕ್ತಿಯೊಬ್ಬರಿಗೂ ಇಬ್ಬರೂ ಸೇರಿ ಹೊಡೆದಿದ್ದಾರೆ. ಹಾಸನದ ಚನ್ನಪಟ್ಟಣ ಸರ್ಕಲ್​ನಲ್ಲಿ ಈ ಹಲ್ಲೆ ಪ್ರಕರಣ ನಡೆದಿದೆ.

ಹಾಸನದ ಚನ್ನಪಟ್ಟಣ ಸರ್ಕಲ್‌ನಲ್ಲಿ ಯುವಕನೊಬ್ಬನಿಗೆ ಇಬ್ಬರು ಮಾರಣಾಂತಿಕವಾಗಿ ಬೇಕಾಬಿಟ್ಟಿ ಥಳಿಸುತ್ತಿರುವುದನ್ನು ಸಾರ್ವಜನಿಕರು ದೂರದಿಂದಲೇ ವಿಡಿಯೋ ಮಾಡಿಕೊಂಡಿದ್ದು, ಆ ದೃಶ್ಯಾವಳಿ ವೈರಲ್ ಆಗಿದೆ.

ಹಲ್ಲೆಗೊಳಗಾದ ಯುವಕ ಹೊಡೆತ ತಾಳಲಾರದೆ ರಸ್ತೆಯಲ್ಲಿ ಕುಸಿದು ಬಿದ್ದರೂ ಪುಂಡರು ಥಳಿಸುವುದನ್ನು ನಿಲ್ಲಿಸಿರಲಿಲ್ಲ. ಅದನ್ನು ತಪ್ಪಿಸಲು ಬಂದ ವ್ಯಕ್ತಿಯೊಬ್ಬರಿಗೂ ಹೊಡೆದಿದ್ದಾರೆ. ಹೀಗಾಗಿ ಬಳಿಕ ಇತರರು ಹಲ್ಲೆಯನ್ನು ನೋಡುತ್ತ ಸುಮ್ಮನಿದ್ದರೆ ವಿನಃ ತಪ್ಪಿಸಲು ಬರಲಿಲ್ಲ. ಹಲ್ಲೆ ಮಾಡಿದವರು, ಹಲ್ಲೆಗೊಳ್ಳಗಾದವರ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net