ಅಲ್ಲೊಂದು ಕೆರೆ, ಇಲ್ಲೊಂದು ಕೆರೆ; ಎರಡೂ ಕಡೇ ಒಂದೇ ಥರದ ಸಾವು: ಸತ್ತವರಿಬ್ಬರಿಗೂ ಒಂದು ಸಾಮ್ಯತೆ!

Death
ನಾಗಪ್ಪ, ದುರುಗಪ್ಪ
Published on

ವಿಜಯನಗರ: ರಾಜ್ಯದ ವಿಜಯನಗರ ಜಿಲ್ಲೆಯ ಎರಡು ಪ್ರತ್ಯೇಕ ಕೆರೆಗಳಲ್ಲಿ ಒಂದೇ ತೆರನಾದ ರೀತಿಯಲ್ಲಿ ಇಬ್ಬರೂ ಸಾವಿಗೀಡಾಗಿದ್ದು, ಸತ್ತವರಿಬ್ಬರಿಗೂ ಒಂದು ಸಾಮ್ಯತೆ ಕಂಡುಬಂದಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಈ ಸಾವುಗಳು ಸಂಭವಿಸಿವೆ.

ಚಿಲುಗೋಡು ಗ್ರಾಮದ ತಳವಾರ ನಾಗಪ್ಪ (55), ಎಚ್. ಓಬಳಾಪುರದ ಕೊಟಗಿ ದುರುಗಪ್ಪ (35) ಎಂಬಿಬ್ಬರು ಸಾವಿಗೀಡಾದ ದುರ್ದೈವಿಗಳು. ಇವರಿಬ್ಬರೂ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಸಾವಿಗೀಡಾಗಿದ್ದಾರೆ.

ತಳವಾರ ನಾಗಪ್ಪ ಬಿ.ಜಿ. ಹಳ್ಳಿ ಕೆರೆಯಲ್ಲಿ ಸಾವಿಗೀಡಾದರೆ, ಕೊಟಗಿ ದುರುಗಪ್ಪ (35) ಹಲಗಾಪುರ ಕೆರೆಯಲ್ಲಿ ಮೃತಪಟ್ಟಿದ್ದಾರೆ. ಇಬ್ಬರೂ ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಅದರಲ್ಲೂ ಮೃತಪಟ್ಟಿರುವ ಈ ಇಬ್ಬರೂ ನರೇಗಾ ಕೆಲಸ ಮಾಡುವ ಸಂದರ್ಭದಲ್ಲೇ ಮರಣ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net