

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಯ ಹಿಂದೆ ಅದೆಷ್ಟು ಜನರಿದ್ದಾರೋ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ದಿನೇದಿನೆ ಮತ್ತಷ್ಟು ಆರೋಪಿಗಳು ಸಿಕ್ಕಿಬೀಳುತ್ತಿದ್ದು ಅವರ ಬಂಧನ ನಡೆಯುತ್ತಿದೆ. ಇಂದು ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಭದ್ರಾವತಿ ಹೊಸಮನೆಯ ಅಬ್ದುಲ್ ರೋಶನ್, ಶಿವಮೊಗ್ಗ ವಾದಿ ಎ ಹುದಾದ ಜಾಫರ್ ಸಾದಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ, ಬಂಧಿತರಿಂದ ಎರಡು ಕಾರು ಮತ್ತು ಒಂದು ಬೈಕ್ ಕೂಡ ವಶಪಡಿಸಿಕೊಂಡಿದ್ದಾರೆ.
ಮೊದಲು ಇಬ್ಬರು, ಆಮೇಲೆ ನಾಲ್ವರು, ಮತ್ತೆ ಇಬ್ಬರ ಬಂಧನವಾಗಿದ್ದು, ಇಂದು ಮತ್ತಿಬ್ಬರ ಬಂಧನ ಆಗುವ ಮೂಲಕ ಹರ್ಷ ಕೊಲೆಗೆ ಸಂಬಂಧಿಸಿದಂತೆ ಒಟ್ಟು ಹತ್ತು ಮಂದಿಯ ಬಂಧನವಾದಂತಾಗಿದೆ. ಇನ್ನಷ್ಟು ಆರೋಪಿಗಳ ಬಂಧನವಾದರೂ ಅಚ್ಚರಿ ಏನಿಲ್ಲ.
ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: ಒಟ್ಟು ಎಂಟು ಆರೋಪಿಗಳ ಬಂಧನ