ಹರ್ಷ ಸಾವಿನ ಮುನ್ಸೂಚನೆ ತಾಯಿಗೆ ಒಂದು ತಿಂಗಳ ಮೊದಲೇ ಸಿಕ್ಕಿತ್ತಾ?!

Harsha
Published on

ಶಿವಮೊಗ್ಗ: ಇತ್ತೀಚೆಗೆ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಸಾವಿನ ವಿಚಾರವಾಗಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ ಪ್ರಕರಣದ ಬಿಸಿ ಇನ್ನೂ ಆರಿಲ್ಲ. ದಿನವೂ ಹರ್ಷ ಕೊಲೆ ಪ್ರಕರಣದ ವಿಚಾರ ಒಂದಲ್ಲ ಒಂದು ರೀತಿಯಲ್ಲಿ ಮುನ್ನೆಲೆಗೆ ಬರುತ್ತಿದೆ.

ಹರ್ಷ ಕುಟುಂಬಕ್ಕೆ ಧನಸಹಾಯ ಪ್ರಕ್ರಿಯೆ, ಕುಟುಂಬಸ್ಥರ ಭೇಟಿ, ಸಂತಾಪ-ಸಂತ್ವಾನಗಳು ಇನ್ನೂ ಮುಂದುವರಿದಿದ್ದು, ಮನೆಯವರ ದುಃಖವೂ ಉಮ್ಮಳಿಸಿ ಬರುತ್ತಲೇ ಇದೆ. ಈ ಮಧ್ಯೆ ಹರ್ಷ ಸಾವಿನ ಮುನ್ಸೂಚನೆ ಒಂದು ತಿಂಗಳ ಮೊದಲೇ ಸಿಕ್ಕಿತ್ತಾ? ಎಂಬ ವಿಚಾರವೊಂದು ಮೂಡಿದೆ.

ಇಂದು ಶಾಸಕ ಎಂ.ಪಿ.ರೇಣುಕಾಚಾರ್ಯ-ಸುಮಾ ದಂಪತಿ ಹರ್ಷ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವೇಳೆ ಇಂಥದ್ದೊಂದು ವಿಷಯ ತಿಳಿದುಬಂದಿದೆ. ಪುತ್ರನ ಬಗ್ಗೆ ಶಾಸಕರ ಬಳಿ ಮಾತನಾಡುತ್ತಿದ್ದ ತಾಯಿ ಪದ್ಮ ಕೆಲವೊಂದು ಅನಿಸಿಕೆಗಳನ್ನು ಹಂಚಿಕೊಂಡರು.

ಒಂದು ತಿಂಗಳಿನಿಂದ ನನಗೆ ಏನೋ ಒಂದು ಥರ ಕಳವಳ ಆಗುತ್ತ ಇತ್ತು. ಆ ರೀತಿ ನನಗೆ ಯಾವತ್ತೂ ಅನಿಸಿರಲಿಲ್ಲ. ಹೀಗಾಗಿ ನಾನು ಪ್ರತಿ ಹತ್ತು ನಿಮಿಷಕ್ಕೆ ಒಮ್ಮೆಯಂತೆ ಮಗನಿಗೆ ಕರೆ ಮಾಡುತ್ತಿದ್ದೆ. ಆದರೂ ಅವನನ್ನು ಕಳೆದುಕೊಳ್ಳುವಂತಾಯಿತು ಎಂದು ತಾಯಿ ಪದ್ಮ ನೋವು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net