ಬೈಕ್​ಗೆ KSRTC ಬಸ್​ ಡಿಕ್ಕಿ; ಇಬ್ಬರು ಸವಾರರು ಸ್ಥಳದಲ್ಲೇ ಸಾವು

Accident
Published on

ತುಮಕೂರು: ಕೆಎಸ್​ಆರ್​ಟಿಸಿ ಬಸ್ (KSRTC Bus) ಹಾಗೂ ಬೈಕ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಬಳಿ ನಡೆದಿದೆ.

ಮೃತರನ್ನು ತಿಪಟೂರು ತಾಲ್ಲೂಕಿನ ಬಿದರೆಕೆರೆ ಗ್ರಾಮದ ನಿವಾಸಿಗಳಾದ ದಯಾನಂದ್ (25), ಯೋಗೇಶ್ (23) ಎಂದು ಗುರುತಿಸಲಾಗಿದೆ. ನೊಣವಿನಕೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ದಯಾನಂದ್ ಹಾಗೂ ಯೋಗೇಶ್​ ಕೆಲಸ ಮುಗಿಸಿಕೊಂಡು ಬಿದರೆಕೆರೆ ಕಡೆಯಿಂದ ತುರುವೇಕೆರೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ತುರುವೇಕೆರೆ ಕಡೆಯಿಂದ ವೇಗವಾಗಿ ಬಂದ ಕೆಎಸ್​​ಆರ್​ಟಿಸಿ ಬಸ್​ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಸವಾರರು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನೊಣವಿನಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನುಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net