ನವದೆಹಲಿ: ಫೆಬ್ರವರಿ 05ರಂದು ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಇಂದು (ಫೆಬ್ರವರಿ 08) ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ (BJP) 49 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತರೂಢ ಎಎಪಿಗೆ ಭಾರೀ ಮುಖಭಂಗವನ್ನುಂಟು ಮಾಡಿದೆ.
ಸದ್ಯ ಲಭ್ಯವಾಗಿರುವ ವರದಿ ಪ್ರಕಾರ ಬಿಜೆಪಿ 49, ಎಎಪಿ (AAP) 20 ಹಾಗೂ ಕಾಂಗ್ರೆಸ್ (Congress) 1 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಸತ್ಯೇಂ,ದ್ರ ಜೈನ್, ಮನೀಶ್ ಸಿಸೋಡಿಯಾಗೆ ಹಿನ್ನಡೆಯಾಗಿದ್ದು, ಸಿಎಂ ಅತಿಶಿ, ಪರ್ವೇಶ್ ಶರ್ಮಾ, ಕಪಿಲ್ ಮಿಶ್ರಾ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, 11 ಗಂಟೆಯ ಹೊತ್ತಿಗೆ ಯಾವ ಪಕ್ಷ ಗದ್ದುಗೆ ಏರುತ್ತದೆ ಎಂಬ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಫೆಬ್ರವರಿ 05ರಂದು ನಡೆದ ಮತದಾನದಲ್ಲಿ ಶೇ. 60.54ರಷ್ಟು ವೋಟಿಂಗ್ ನಡೆದಿತ್ತು. 13,766 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 699 ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂ ಯಂತ್ರಗಳಲ್ಲಿ ಸೀಲ್ ಮಾಡಲಾಗಿದೆ. 70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 05ರಂದು ಮತದಾನ ನಡೆದಿತ್ತು.
ಎರಡನೇ ಪಂದ್ಯಕ್ಕೆ Virat Kohli ಲಭ್ಯ! ರನ್ಮೆಷಿನ್ ಆಗಮನದಿಂದ ತಂಡದಲ್ಲಿ ಮಹತ್ವದ ಬದಲಾವಣೆ ಫಿಕ್ಸ್
ಸ್ಥಳೀಯರೊಂದಿಗೆ Cricket ಆಡಿದ ನಾಗಾಸಾಧುಗಳು; ವೈರಲ್ ವಿಡಿಯೋ ನೋಡಿದ ನೆಟ್ಟಿಗರ ರಿಯಾಕ್ಷನ್ ಮಾತ್ರ…
ಇಂದು ದೆಹಲಿ Election Result; ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಆಪ್, 25 ವರ್ಷಗಳ ಅರಳಲಿದೆಯಾ ಮುದುಡಿದ ತಾವರೆ?