ಆಭರಣ ಕಳ್ಳರಿಬ್ಬರ ಬಂಧನ

3mnd1= gold crime
Published on

ಮುಂಡಗೋಡ: ಪಟ್ಟಣದ ವಡ್ಡರ ಓಣಿಯಲ್ಲಿ ಮನೆಯ ಹಿಂದಿನ ಬಾಗಿಲು ತೆಗೆದು ಮನೆಯಲ್ಲಿನ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಸುಭಾಸನಗರದ ಪ್ರವೀಣ ಬಸವರಾಜ ಭೋವಿ (23) ಹಾಗೂ ಕ್ಯಾಸನಕೇರಿ ಗ್ರಾಮದ ರಾಕೇಶ ಹನುಮಂತ ಹೆಬ್ಬಳ್ಳಿ (21) ಎಂಬುವರೇ ಬಂಧಿತರು.

ಪಟ್ಟಣದ ವಡ್ಡರಓಣಿಯ ತಿಪ್ಪವ್ವ ತಿಪ್ಪಣ್ಣ ಭೋವಿ ಎಂಬುವರ ಮನೆಯ ಹಿಂಬದಿ ಬಾಗಿಲನ್ನು ಜ. 27ರಂದು ಮಧ್ಯಾಹ್ನ ತೆಗೆದು ಮನೆಯಲ್ಲಿದ್ದ ಐದು ಗ್ರಾಂ ತೂಕದ ಬಂಗಾರದ ಬೋರಮಾಳ ಸರಾ, ಮೂರು ಗ್ರಾಮದ ತೂಕದ ಕಿವಿ ಜಾಲರಿ, 1 ಜೋಡಿ ಬೆಂಡೋಲೆ, ಹಾಗೂ ಎರಡು ಸಾವಿರ ರೂ. ನಗದು ದೋಚಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಎಸ್​ಪಿ ಎಂ. ನಾರಾಯಣ ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್​ಐ ಪರಶುರಾಮ ಮಿರ್ಜಗಿ, ಹನ್ಮಂತ ಕುಡಗುಂಟಿ,ಸಿಬ್ಬಂದಿ ಮಂಜಪ್ಪ ಚಿಂಚಲಿ, ಕೊಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬುಡಿಗೇರಿ, ತಿರುಪತಿ ಚೌಡಣ್ಣವರ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net