ಹಿಟಾಚಿಗೆ ಗೂಡ್ಸ್ ಡಿಕ್ಕಿಯಾಗಿ ಇಬ್ಬರು ಗಾಯ

accident raichur
Published on

ಹೆಬ್ರಿ: ಹೆಬ್ರಿ-ಉಡುಪಿ ರಾಷ್ಟ್ರೀಯ ಹೆದ್ದಾರಿ ಶಿವಪುರದ ಪಿಲಿಬೈಲು ರಸ್ತೆ ಬದಿಯಲ್ಲಿ ಚರಂಡಿ ಕೆಲಸ ನಿರ್ವಹಿಸುತ್ತಿದ್ದ ಹಿಟಾಚಿಗೆ ಗೂಡ್ಸ್ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ರಾಜಕುಮಾರ್ ಯಾದವ್ ಎಂಬುವರು ಹೆಬ್ರಿ-ಉಡುಪಿ ರಸ್ತೆಯ 169-ಎರಲ್ಲಿ ಶಿವಪುರದ ಪಿಲಿಬೈಲು ಸೇತುವೆ ಸಮೀಪ ರಸ್ತೆ ಚರಂಡಿ ಕೆಲಸ ಮಾಡುತ್ತಿದ್ದ ವೇಳೆ ಹೆಬ್ರಿ ಕಡೆಯಿಂದ ಬಂದ ಗೂಡ್ಸ್ ವಾಹನ ಹಿಟಾಚಿಗೆ ಡಿಕ್ಕಿಯಾದ ರಭಸಕ್ಕೆ ಹಿಟಾಚಿ ಚರಂಡಿಗೆ ಬಿದ್ದು ಎರಡೂ ವಾಹನ ಜಖಂಗೊಂಡಿದೆ. ಅಪಘಾತದಲ್ಲಿ ಹಿಟಾಚಿ ಚಾಲಕ ಹಾಗೂ ಗೂಡ್ಸ್‌ನಲ್ಲಿದ್ದ ಸಹಸವಾರ ಸಂತೋಷ್ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net