

ವಿಜಯವಾಣಿ ಸುದ್ದಿಜಾಲ ಕೋಟ
ಸ್ಥಳೀಯ ಕಮರ್ಷಿಯಲ್ ವಾಹನಗಳಿಗೆ ದಿಢೀರ್ ಟೋಲ್ ವಸೂಲಾತಿ ಹಿನ್ನೆಲೆಯಲ್ಲಿ ಸಾಸ್ತಾನ ಟೋಲ್ನಲ್ಲಿ ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಯಿತು.
ಗುರುವಾರ ರಾತ್ರಿಯಿಂದಲೇ ಸ್ಥಳೀಯ ಕಮರ್ಷಿಯಲ್ ವಾಹನಗಳಿಗೆ ಸೂಂಕ ವಿಧಿಸಲಾರಂಭಿಸಿದ್ದು, ಇದರಿಂದ ಆಕ್ರೋಶಗೊಂಡಿದ್ದ ಸ್ಥಳೀಯ ವಾಹನ ಮಾಲೀಕರು ಶುಕ್ರವಾರ ಮಧ್ಯಾಹ್ನ ಭಾರಿ ಸಂಖ್ಯೆಯಲ್ಲಿ ಟೋಲ್ಪ್ಲಾಜಾಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬ್ರಹ್ಮಾವರ ಸರ್ಕಲ್ ದಿವಾಕರ್ ಪ್ರತಿಭಟನಾ ನಿರತರ ಮನವೊಲಿಸಲು ಯತ್ನಿಸಿದರು. ಈ ವೇಳೆ ವಾಹನ ಮಾಲೀಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ಸಭೆ ನಡೆಸಿದ ಟೋಲ್ ಕಂಪನಿ ಪ್ರಮುಖರು ಟೋಲ್ ವಿನಾಯಿತಿ ನೀಡಲು ನಿರಾಕರಿಸಿದ್ದು, ಆಕ್ರೋಶಗೊಂಡ ಪ್ರತಿಭಟನಾಕಾರರು ಎರಡೂ ಕಡೆಯ ಗೇಟ್ ಬಂದ್ ಮಾಡಿದರು. ನವಯುಗ ಕಂಪನಿ ಹಾಗೂ ಕೆಕೆಆರ್ ಕಂಪನಿಗಳ ನಡುವಿನ ಟೋಲ್ ತಿಕ್ಕಾಟದಿಂದ ವಾಹನ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆರೋಪಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ದೂರವಾಣಿ ಮೂಲಕ ಟೋಲ್ ಕಂಪನಿಗಳನ್ನು ಸಂಪರ್ಕಿಸಿದ್ದು, ಶನಿವಾರ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಟೋಲ್ ಸಂಸ್ಥೆಗೆ ಹಾಗೂ ಸಮಸ್ಯೆ ಬಗೆಹರಿಸುವ ಕುರಿತು ತಮ್ಮನ್ನು ಭೇಟಿಯಾಗುವಂತೆ ಪ್ರತಿಭಟನಾಕಾರರಿಗೆ ಸೂಚನೆ ನೀಡಿದರು.
ದಿನಕ್ಕೆ ಹತ್ತಾರು ಬಾರಿ ಟೋಲ್ ಮೂಲಕ ಸಂಚರಿಸುವ ಸ್ಥಳೀಯ ಯೆಲ್ಲೋ ಬೋರ್ಡ್ ವಾಹನಗಳಿಗೆ ದಿಢೀರ್ ಟೋಲ್ ವಸೂಲಾತಿ ಸರಿಯಲ್ಲ. ವಿನಾಯಿತಿ ನೀಡಲೇಬೇಕಿದ್ದು, ಪದೇ ಪದೆ ಟೋಲ್ ವಸೂಲಾತಿ ದರೋಡೆಗೆ ಸಮಾನ. ಈ ಬಗ್ಗೆ ಸಂಬಂಧಿಸಿತ ಇಲಾಖೆ, ಸಂಸದರು ನ್ಯಾಯ ಒದಗಿಸುವ ಭರವಸೆ ಇದೆ. -ಭೋಜ ಪೂಜಾರಿ, ಸ್ಥಳೀಯ ಹೋರಾಟರರು https://www.vijayavani.net/tipper-runs-over-legs-serious https://www.vijayavani.net/kotilingeshwar-temple-glorious-brahmarathotsav