ಬನಹಟ್ಟಿಯಲ್ಲಿ ಇಬ್ಬರು ಬಾಲಕಿಯರು ಭೀಮೆ ಪಾಲು

IMG-20241010-WA0041
Published on

ಬನಹಟ್ಟಿಯಲ್ಲಿ ಇಬ್ಬರು ಬಾಲಕಿಯರು ಭೀಮೆ ಪಾಲು

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬನ್ನಹಟ್ಟಿ ಗ್ರಾಮದ. ಬಳಿಯಿರುವ ಭೀಮಾ‌ ನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಇಬ್ಬರು ಬಾಲಕಿಯರು ನೀರು ಪಾಲಾಗಿದ್ದಾರೆ.

ಭೂಮಿಕಾ ದೊಡ್ಡಮನಿ( 1೦ )ಮತ್ತು ಶ್ರಾವಣಿ ನಾಟೀಕಾರ (1೦ ) ಭೀಮೆ ಪಾಲಾದ ಬಾಲಕಿಯರು

ಬಟ್ಟೆ ವಾಶ್ ಮಾಡಿದ‌‌ ನಂತರ ನದಿಯಲ್ಲಿ ಈಜಾಡಲು ಹೋದಾಗ ಭೂಮಿಕಾ ಕಾಲು ಜಾರಿ ನದಿಯಲ್ಲಿ ಕೊಚ್ಚಿಕೊಂಡು ಹೋಗ್ತಿದ್ದಾಗ ಕಾಪಾಡಲು ಶ್ರವಣಿ ಮುಂದಾಗಿದ್ದಾಳೆ. ನೀರಿನ ರಭಸದಿಂದ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಶ್ರಾವಣಿ ಶವ ನದಿಯಲ್ಲಿ ಪತ್ತೆ ಮತ್ತೊಬ್ಬ ಬಾಲಕಿಗಾಗಿ ಹುಡುಕಾಟ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಂದ ಹುಡುಕಾಟ ನಡೆದಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net