ಶಿರೂರಿನಲ್ಲಿ ದೋಣಿ ದುರಂತ ಸಂಭವಿಸಿ ಇಬ್ಬರು ಮೀನುಗಾರರ ದುರ್ಮರಣ

doni duranta
ದೋಣಿ ದುರಂತ ಸಂಭವಿಸಿದ ಬಳಿಕ ತೀರದಲ್ಲಿ ಜಮಾಯಿಸಿರುವ ಕುತೂಹಲಿಗರು.
Published on

ಬೈಂದೂರು: ಮೀನುಗಾರಿಕೆಗೆ ತೆರಳಿ ವಾಪಾಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಮೃತಪಟ್ಟ ಘಟನೆ ಶಿರೂರು ಕಳುವಿತ್ಲುವಿನಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಶಿರೂರು ಕಳುಹಿತ್ಲು ಅಳಿವೆ ಬಳಿ ದುರಂತ

ಭಾನುವಾರ ರಾತ್ರಿ 10ಗಂಟೆಗೆ ಶಿರೂರು ಕಳುಹಿತ್ಲುನಿಂದ ಮೀನುಗಾರಿಕೆಗೆ ತೆರಳಿದ ನುಮೈರಾ ಅಂಜುಮ್ ದೋಣಿಯಲ್ಲಿ 3 ಜನ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸಿ ವಾಪಾಸು ಬರುವಾಗ ಮಧ್ಯರಾತ್ರಿ 1.30ಗಂಟೆಗೆ ಶಿರೂರು ಕಳುಹಿತ್ಲು ಅಳಿವೆ ಸಮೀಪ ಅರಬ್ಬೀ ಸಮುದ್ರದಲ್ಲಿ ದೋಣಿ ಮಗುಚಿದೆ. ದೋಣಿಯಲ್ಲಿದ್ದ ನನ್ನು ಅಬ್ಸುಲ್ ಸತ್ತರ್(45 ), ಮಿಸ್ಬಾ ಯೂಸುಫ್(48) ಮೃತಪಟ್ಟಿದ್ದಾರೆ. ದೋಣಿಯಲ್ಲಿದ್ದ ಮತ್ತೋರ್ವ ಬುಡ್ಡು ಮುಖ್ತಾರ್(37) ಹಡವಿನಕೋಣೆ ಅವರನ್ನು ಇನ್ನೊಂದು ದೋಣಿಯಲ್ಲಿದ್ದ ಮಾಮ್ಸು ಯಾಕೂಬ್ ರಕ್ಷಣೆ ಮಾಡಿದ್ದಾರೆ.

ಮತ್ತೆ ಸಂಭವಿಸಿತು ದುರಂತ

ಈ ಭಾಗದಲ್ಲಿ ಕೆಲವೇ ತಿಂಗಳುಗಳ ಹಿಂದೆ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿದ್ದು ಈ ವರ್ಷ ಬೈಂದೂರು ಭಾಗದಲ್ಲಿ ಅತ್ಯಧಿಕ ಮೀನುಗಾರಿಕಾ ದುರಂತಗಳು ನಡೆದಿವೆ. ಕರಾವಳಿ ಕಾವಲು ಪಡೆ ಹಾಗೂ ಆರಕ್ಷಕ ಸಿಬ್ಬಂದಿ ಆಗಮಿಸಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net