ನೀರಿಲ್ಲದೆ ಕನಕಪುರ ಕಾಡಿನಲ್ಲಿ ಎರಡು ಆನೆಗಳ ಸಾವು

a3248ce6-166a-4a08-8852-7b82a7112eb8
Published on

ರಾಮನಗರ: ಬಿಸಿಲ ಬೇಗೆ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಎರಡು ಕಾಡಾನೆಗಳು ಮೃತಪಟ್ಟಿರುವ ಘಟನೆ ಕನಕಪುರ ತಾಲೂಕಿನಲ್ಲಿ ನಡೆದಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೋಡಿಹಳ್ಳಿ ವಲಯದ ಯಲವನಾಥ ಅರಣ್ಯಪ್ರದೇಶ ಹಾಗೂ ರಾಮನಗರ ಪ್ರಾದೇಶಿಕ ಅರಣ್ಯ ವಿಭಾಗದ ಬೆಟ್ಟಹಳ್ಳಿ ಬೀಟ್‌ನಲ್ಲಿ ತಲಾ ಒಂದೊಂದು ಕಾಡಾನೆ ಮೃತಪಟ್ಟಿವೆ.

ಯಲವನಾಥ ಅರಣ್ಯದಲ್ಲಿ ಮೃತಪಟ್ಟ ಆನೆ ಸುಮಾರು 35 ವರ್ಷ  ಹಾಗೂ ಬೆಟ್ಟಹಳ್ಳಿ ಬೀಟ್ ಕಾಡಿನಲ್ಲಿ ಮೃತಪಟ್ಟ ಆನೆ 14 ವರ್ಷ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ನಿತ್ರಾಣಗೊಂಡಿತ್ತು: ರಾಮನಗರದ ಕನಕಪುರ ವಲಯದ ಬೆಟ್ಟಹಳ್ಳಿ ಬೀಟ್‌ನಲ್ಲಿ ಮೃತಪಟ್ಟಿರುವ 14 ವರ್ಷದ ಗಂಡಾನೆ ಕಳೆದ ಮೂರು ದಿನಗಳ ಹಿಂದೆ ಜಮೀನೊಂದಕ್ಕೆ ಬಂದು ಬಿಸಿಲ ಬೇಗೆ ತಾಳಲಾರದೆ ಕುಸಿದು ಬಿದ್ದಿತ್ತು. ನಿತ್ರಾಣಗೊಂಡಿದ್ದ ಕಾಡಾನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿ, ನಂತರ ಕಾಡಿಗೆ ಅಟ್ಟಿದ್ದರು. ಆದರೆ, ಭಾನುವಾರ ಅದು ಮೃತಪಟ್ಟಿರುವುದು ತಿಳಿದು ಬಂದಿದೆ. ಘಟನೆಗೆ ಆನೆ ಅತಿಯಾದ ಮಾವಿನ ಕಾಯಿ ತಿಂದು,ಕುಡಿಯಲು ನೀರು ಇಲ್ಲದೆ ಇರುವುದು ಕಾರಣ ಎನ್ನುವುದು ವೈಧ್ಯಕೀಯ ಪರೀಕ್ಷೆಯಲ್ಲಿ ಮೃತಪಟ್ಟಿದೆ. ಮತ್ತೊಂದೆ ಆನೆ ಸಹ ನೀರಿನ ಕೊರತೆಯಿಂದಲೇ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಈ ಎರಡೂ ಘಟನೆಗಳು ತಮಿಳುನಾಡಿನ ಗಡಿಗೆ ಹೊಂದಿಕೊಂಡಂತೆ ಇರುವ ಅರಣ್ಯದಲ್ಲಿಯೇ ನಡೆದಿದೆ. ಈಗಾಗಲೇ ಅರಣ್ಯದಲ್ಲಿ ನೀರಿನ ಕೊರತೆ ಎದುರಾಗಿದ್ದು, ಅರಣ್ಯ ಇಲಾಖೆ ಕಾಡಿನಲ್ಲಿ ತಾತ್ಕಾಲಿಕ ಹೊಂಡಗಳನ್ನು ನಿರ್ಮಿಸಿ ಕಾಡು ಪ್ರಾಣಿಗಳಿಗೆ ನೀರು ಒದಗಿಸುವ ಕೆಲಸವನ್ನು ಕೂಡಲೇ ಕೈಗೆತ್ತಿಕೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net