ಅಪಘಾತದಲ್ಲಿ ಚಾಲಕರಿಬ್ಬರಿಗೆ ಗಾಯ

02sunti03
Published on

ಸುಂಟಿಕೊಪ್ಪ : ಕೆದಕಲ್ ವ್ಯಾಪ್ತಿಯ 7ನೇ ಮೈಲ್ ಬಳಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಚಾಲಕರಿಬ್ಬರು ಗಾಯಗೊಂಡಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ.

ಸುಂಟಿಕೊಪ್ಪದಿಂದ ಮಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ಮಡಿಕೇರಿ ಕಡೆಯಿಂದ ಸುಂಟಿಕೊಪ್ಪ ಕಡೆಗೆ ಆಗಮಿಸುತ್ತಿದ್ದ ಕ್ಯಾಂಟರ್ ನಡುವೆ ಕೆದಕಲ್ ವ್ಯಾಪ್ತಿಯ 7ನೇ ಮೈಲ್ ತಿರುವಿನಲ್ಲಿ ಡಿಕ್ಕಿಯಾಗಿದ್ದು ಬಸ್ ಚಾಲಕ ಶಿವಾನಂದ್ ಹಾಗೂ ಲಾರಿ ಚಾಲಕ ಪ್ರತಾಪ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬಸ್ಸಿನಲ್ಲಿದ್ದ ಒಟ್ಟು 50 ಪ್ರಯಾಣಿಕರು ಪ್ರಾಯಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣೆ ಪಿಎಸ್‌ಐ ಜಗದೀಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net