ಸೆಂಟ್ರಿಂಗ್ ಕುಸಿದು ಇಬ್ಬರ ಸಾವು, 6 ಮಂದಿಗೆ ಗಂಭೀರ ಗಾಯ; ಶಾಸಕರೊಬ್ಬರ ಪುತ್ರನಿಗೆ ಸೇರಿದ ಎಥನಾಲ್ ಘಟಕ

Untitled-1
Published on

ದಾವಣಗೆರೆ: ಶಾಸಕರೊಬ್ಬರ ಪುತ್ರನಿಗೆ ಸೇರಿರುವ ಸಕ್ಕರೆ ಕಾರ್ಖಾನೆಯ ಎಥನಾಲ್ ಘಟಕದಲ್ಲಿನ ಸೆಂಟ್ರಿಂಗ್ ಕುಸಿದು ಇಬ್ಬರು ಸಾವಿಗೀಡಾಗಿದ್ದು, ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ದಾವಣಗೆರೆಯ ಕುಕ್ಕವಾಡದ ಎಥನಾಲ್​ ಘಟಕದಲ್ಲಿ ಈ ಪ್ರಕರಣ ನಡೆದಿದೆ.

ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆಯಯಲ್ಲಿ ಎಥನಾಲ್ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ಮಧ್ಯಾಹ್ನ 3.30ರ ಸುಮಾರಿಗೆ ಕುಸಿದಿದೆ. ಆರ್​ಸಿಸಿ ಚಾವಣಿ ನಿರ್ಮಿಸುವಾಗ ಈ ಕುಸಿತ ಕಂಡಿದೆ. ಪ್ರಕರಣ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಇನ್ನಷ್ಟು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ಶೋಧ ಮುಂದುವರಿದಿದೆ. ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಸಕ್ಕರೆ ಕಾರ್ಖಾನೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್.‌ ಗಣೇಶ ಒಡೆತನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net