ಸ್ಕೂಟರ್​ಗೆ ಗುದ್ದಿದ ಲಾರಿ;​ ಇಬ್ಬರು ಯುವಕರು ಮೃತ್ಯು

Bike Accident
Published on

ಬೆಂಗಳೂರು: ಟಿಪ್ಪರ್​ ಚಾಲಕನ ಅಜಾಗರೂಕತೆಯಿಂದಾಗಿ ಇಬ್ಬರು ಯುವಕರು ಬಲಿಯಾಗಿರುವ ಘಟನೆ ಬೆಂಗಳೂರು ನಗರದ ಪುಲಕೇಶಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಯೂಸುಫ್​(19) ಹಾಗೂ ಫರಜ್​(19) ಎಂದು ಗುರುತಿಲಸಲಾಗಿದ್ದು, ಟಿಪ್ಪರ್​ ಚಾಲಕ ಸುನೀಲ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Bike Accident

ಒನ್​ವೇನಲ್ಲಿ ಸಂಚಾರ

ಘಟನೆಯೂ ಮಂಗಳವಾರ ತಡರಾತ್ರಿ ನಡೆದಿದ್ದು, ಖಾಸಗಿ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರು ಮನೆಗೆ ವಾಪಸ್​ ಬರುವ ವೇಳೆ ಟಿಪ್ಪರ್​ ಒನ್​ವೇನಲ್ಲಿ ವೇಗವಾಗಿ ಬಂದಿದೆ. ಎದುರು ಬದಿಯಲ್ಲಿ ಸ್ಕೂಟರ್ನಲ್ಲಿ ಬರುತ್ತಿದ್ದ ಇಬ್ಬರು ಯುವಕರ ಮೇಲೆ ಲಾರಿ ಹರಿದಿದೆ.

ಸ್ಥಳಕ್ಕೆ ಭೇಟಿ ನೀಡಿದ ಪುಲಕೇಶಿನಗರ ಸಂಚಾರಿ ಠಾಣೆ ಪೊಲೀಸರು ಯುವಕರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ಧಾರೆ. ಅಜಾಗರೂಕತೆಯಿಂದ ಚಾಲನೆ ಮಾಡಿ ಇಬ್ಬರನ್ನು ಬಲಿ ಪಡೆದ ಟಿಪ್ಪರ್ ಚಾಲಕನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net