ಮಂಚೇನಹಳ್ಳಿ: ಗೌರಿಬಿದನೂರಿನ ಬೈಪಾಸ್ ಗಣೇಶನ ಮೆರವಣಿಗೆ ನೋಡಲು ತೆರಳುತ್ತಿದ್ದಾಗ ಮುದುಗಾನಗುಂಟೆ ಕ್ರಾಸ್ ಬಳಿ ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಒಬ್ಬನಿಗೆ ಗಂಭೀರ ಗಾಯವಾಗಿದೆ. ಮಂಚೇನಹಳ್ಳಿಯ ಶಫಿ (42), ಮೆಕ್ಯಾನಿಕ್ ಮುನಿರಾಜ(32)ಮೃತರು. ಕಣ್ಣು ಮತ್ತು ತಲೆಗೆ ಬಲವಾಗಿ ಪೆಟ್ಟು ಬಿದ್ದು ಗಂಭೀರ ಸ್ಥಿತಿಯಲ್ಲಿರುವ ರಮೇಶ್(42)ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮಂಚೇನಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.