ರಾಜ್ಯದ ಎರಡು ಜಿಲ್ಲೆಗಳಿಗೆ ಹೊಸ ಜಿಲ್ಲಾಧಿಕಾರಿ: ಉಭಯ ಜಿಲ್ಲೆಗಳ ಡಿಸಿ ಅದಲು-ಬದಲು!

F
Published on

ರಾಯಚೂರು: ರಾಜ್ಯದ ಎರಡು ಜಿಲ್ಲೆಗಳಿಗೆ ನೂತನ ಜಿಲ್ಲಾಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ವಿಶೇಷವೆಂದರೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಅದಲು-ಬದಲು ಮಾಡಲಾಗಿದೆ.

ಕೊಡಗಿನ ನೂತನ ಜಿಲ್ಲಾಧಿಕಾರಿಯಾಗಿ ಡಾ.ಬಿ.ಸಿ. ಸತೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರು ಇದಕ್ಕೂ ಮೊದಲು ರಾಯಚೂರು ಜಿಲ್ಲಾಧಿಕಾರಿ ಆಗಿದ್ದರು.

ಹಾಗೆಯೇ ರಾಯಚೂರಿನ ನೂತನ ಜಿಲ್ಲಾಧಿಕಾರಿ ಆಗಿ ಚಾರುಲತಾ ಸೋಮಲ್ ಅವರನ್ನು ನೇಮಕ ಮಾಡಲಾಗಿದೆ. ಇವರು ಇದಕ್ಕೂ ಮೊದಲು ಕೊಡಗು ಜಿಲ್ಲಾಧಿಕಾರಿ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net