

ತುಮಕೂರು: ಹೇಮಾವತಿ ನಾಲೆಗೆ ಬಿದ್ದು ಇಬ್ಬರು ಮಕ್ಕಳು ದುರ್ಮರಣಕ್ಕೀಡಾಗಿರುವ ಘಟನೆ ಗುಬ್ಬಿ ತಾಲೂಕಿನ ಇಸ್ಲಾಂಪುರ ಗ್ರಾಮದಬಳಿ ಶುಕ್ರವಾರ ನಡೆದಿದೆ.
ಮಹಮ್ಮದ್ ನಯೀಮ್ (7) ಮಿಸ್ಬಾಬಾನು(9) ಸಾವನ್ನಪ್ಪಿದ್ದು ಮಹ್ಮದ್ ಬಿಲಾಲ್ (10) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಾಲೆಯಲ್ಲಿ ಕೊಚ್ಚಿ ಹೋಗಿರುವ ಮಿಸ್ಬಾಬಾನು ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಶೋಧ ನಡೆಸಿದೆ.
ಮೂವರು ಮಕ್ಕಳು ನಾಲೆಗೆ ಬಿದ್ದಿದ್ದಿನ್ನು ಗಮನಿಸಿದ ಸ್ಥಳೀಯ ಯುವಕ ಮಕ್ಕಳ ರಕ್ಷಣೆಗೆ ಮುಂದಾಗಿದ್ದು ಮಹಮ್ಮದ್ ಬಿಲಾಲ್ ಎಂಬಾತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇನ್ನಿಬ್ಬರು ಮಕ್ಕಳು ನಾಲೆ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.