

ಬಿಡದಿ: ದ್ವಿಚಕ್ರ ಕಳ್ಳತನ ಆರೋಪದಲ್ಲಿ ಇಬ್ಬರನ್ನು ಬಂಧಿಸಿ, 3 ಲ ರೂ. ಮೌಲ್ಯದ 1 ಪಲ್ಸರ್ 5 ಸ್ಕೂಟಿ ಸೇರಿ 6 ಬೈಕ್ಗಳನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೋಜ್ ಕುಮಾರ್, ಪೃಥ್ವಿ ಕುಲಕರ್ಣಿ ಬಂಧಿತರು.
ಕಂಚುಗಾರನಹಳ್ಳಿಯ ಲೋಕೇಶ್ ಅವರು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳೆದ ಶನಿವಾರ ಕಳವಾಗಿತ್ತು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಸಿಪಿಐ ಶಂಕರ್ ನಾಯಕ್ ನೇತೃತ್ವದಲ್ಲಿ ಬಲೆ ಬೀಸಲಾಗಿತ್ತು.