ಇಬ್ಬರು ಬೈಕ್ ಕಳ್ಳರ ಬಂಧನ

ಇಬ್ಬರು ಬೈಕ್ ಕಳ್ಳರ ಬಂಧನ
Published on

ಯಳಂದೂರು: ಸಂತೇಮರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬೈಕ್‌ನ್ನು ತಿ.ನರಸೀಪುರದಿಂದ ಕುಂತೂರು ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಟಗರಪುರ ಸಮೀಪದಲ್ಲಿ ಸಂತೇಮರಹಳ್ಳಿ ಸಬ್‌ಇನ್‌ಸ್ಪೆಕ್ಟರ್ ಟಿ.ಎಂ.ತಾಜುದ್ದಿನ್ ನೇತೃತ್ವದ ತಂಡ ವಶಕ್ಕೆ ಪಡೆದಿದೆ.

ಬೈಕ್ ನಂಬರ್ ಪ್ಲೇಟ್‌ನ್ನು ಬದಲಿಸಿಕೊಂಡು ಸಂಚಾರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಕುಂತೂರು ಮೋಳೆ ಸಿದ್ದಪ್ಪಸ್ವಾಮಿ, ಕಮರವಾಡಿ ಸಿದ್ದರಾಜು ಬಂಧಿತರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಕುಮಾರ್ ಸಂತೇಮರಹಳ್ಳಿ ಪೆಟ್ರೋಲ್‌ಬಂಕ್‌ನಲ್ಲಿ ಬೈಕ್ ನಿಲ್ಲಿಸಿದಾಗ ಕಳುವಾಗಿತ್ತು.

ಕಾರ್ಯಚರಣೆಯಲ್ಲಿ ಎಎಸ್‌ಐ ಉಮೇಶ್, ಸಿಬ್ಬಂದಿ ರಮೇಶ್, ಯಶವಂತ್, ಕುಮಾರ್, ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net