

ಮಳವಳ್ಳಿ: ತಾಲೂಕಿನ ಕಿರುಗಾವಲು ಗ್ರಾಮದ ರೈತನ ಪುತ್ರನೊಬ್ಬ ಸಾಕಿದ್ದ ಬಂಡೂರು ತಳಿಯ ಎಂಟು ತಿಂಗಳ ಎರಡು ಗಂಡು ಕುರಿ ಮರಿಗಳು ಬರೋಬರಿ 1.60 ಲಕ್ಷ ರೂ. ಗೆ ಮಾರಾಟವಾಗಿವೆ.
ಗ್ರಾಮದ ಮನೋಹರ್ ಪುತ್ರ ಉಲ್ಲಾಸ್ ಗೌಡ ಎಂಬ ಯುವಕ ಶಿಕ್ಷಣದ ಜತೆಗೆ ಕುರಿ ಸಾಕಣೆ ಮಾಡುತ್ತಿದ್ದಾರೆ. ಈ ಯುವಕ ಸಾಕಿದ್ದ ಬಂಡೂರು ತಳಿಯ ಕುರಿ ಜನ್ಮ ನೀಡಿದ್ದ 8 ತಿಂಗಳ ಎರಡು ಗಂಡು ಕುರಿ ದಾಖಲೆ ಬೆಲೆಗೆ ಮಾರಾಟವಾಗಿದೆ.
ತಾಲೂಕಿನ ವಡ್ಡರಹಳ್ಳಿ ಗ್ರಾಮದ ಅನಿಲ್ ಕುಮಾರ್ ಎಂಬುವರು ತಳಿ ಅಭಿವೃದ್ಧಿಗಾಗಿ ಕುರಿಗೆ ತಲಾ ಒಂದಕ್ಕೆ 80 ಸಾವಿರ ರೂ.ನೀಡಿ ಖರೀದಿಸಿದ್ದಾರೆ.
ಮಂಗಳವಾರ ಮಾರಾಟವಾದ ಟಗರುಗಳಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ ನಂತರ ಅನಿಕ್ ಕುಮಾರ್ ಅವರಿಗೆ ಮಾಲೀಕ ಉಲ್ಲಾಸ್ ಗೌಡ ಹಸ್ತಾಂತರಿಸಿದರು.
ರೈತ ಮನೋಹರ್, ಗ್ರಾಮದ ಮುಖಂಡರಾದ ಬೊಕಳೆಗೌಡ, ಮಾದೇವ, ಕುಮಾರ್, ಕುಳ್ಳೇಗೌಡ, ಪುಟ್ಟಸ್ವಾಮಿ, ಚೇತನ್ ಇದ್ದರು.