ಕಾರು ಅಪಹರಿಸಿದ್ದ ಇಬ್ಬರ ಬಂಧನ

ಕಾರು ಅಪಹರಿಸಿದ್ದ ಇಬ್ಬರ ಬಂಧನ
Published on

ಪಿರಿಯಾಪಟ್ಟಣ: ಚಾಲಕನ ಮೇಲೆ ಹಲ್ಲೆ ನಡೆಸಿ ಕಾರನ್ನು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಫೆ.12ರಂದು ರಾತ್ರಿ 9.30ರಲ್ಲಿ ಹುಣಸೂರಿನಿಂದ ರಾಮನಾಥಪುರದ ದೇವಸ್ಥಾನಕ್ಕೆ ಹೋಗಲು ಹುಣಸೂರಿನ ನಾಸೀರ್ ಖಾನ್ ಎಂಬುವವರ ಕಾರನ್ನು ಬಾಡಿಗೆಗೆ ಪಡೆದು ಕೃತ್ಯ ಎಸಗಲಾಗಿದೆ.

ಹುಣಸೂರಿನಿಂದ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಮಾರ್ಗವಾಗಿ ಕಾರಿನಲ್ಲಿ ಹೋಗುವಾಗ ಭೋಗನಹಳ್ಳಿ-ಮಾಕೋಡು ಗ್ರಾಮದ ಮಧ್ಯೆ ಕಾರು ನಿಲ್ಲಿಸಿ ಚಾಲಕ ನಾಸೀರ್ ಖಾನ್‌ಗೆ ಆರೋಪಿಗಳು ಹಲ್ಲೆ ನಡೆಸಿ ಒಂದು ಮೊಬೈಲ್, 700 ರೂ. ನಗದು ಕಸಿದು ಕಾರನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ. ನಾಸಿರ್ ಖಾನ್ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಹುಣಸೂರು ಉಪವಿಭಾಗದ ಡಿವೈಎಸ್‌ಪಿ ಗೋಪಾಲಕೃಷ್ಣ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಪಿರಿಯಾಪಟ್ಟಣ ಠಾಣಾ ಪೊಲೀಸರು ಆನಂದನಗರದ ಒಬ್ಬ ಆರೋಪಿ ಹಾಗೂ ಎಚ್.ಡಿ. ಕೋಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ, ಸಬ್ ಇನ್ಸ್‌ಸ್ಪೆಕ್ಟರ್ ಆಕಾಶ್, ಅಪರಾಧ ವಿಭಾಗದ ಸಿಬ್ಬಂದಿ ಲಿಂಗರಾಜಪ್ಪ, ಶೇಖರ್, ಸಂಜಯ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net