

ಶಿರ್ವ: ಬಂಟಕಲ್ಲು ಬಸ್ ನಿಲ್ದಾಣದ ಬಳಿ ಸಿಗರೇಟ್‌ನಲ್ಲಿ ಮಾದಕ ವಸ್ತುವನ್ನು ಸೇರಿಸಿ ಸೇದುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಪ್ರಸಾದ್ (30) ಬಂಧಿತ ಆರೋಪಿ.
ಮತ್ತೊಂದು ಪ್ರಕರಣಧಲ್ಲಿ ಬಂಟಕಲ್ಲು ಬಸ್ ನಿಲ್ದಾಣದ ಬಳಿ ಆಲ್ವೀನ್ ಶರೂನ್ ಡಿ ಅಲ್ಮೇಡ (29) ಎಂಬಾತ ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದವನನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದರು. ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.