ಮುಳ್ಳುಹಂದಿ ಕೊಂದ ಇಬ್ಬರ ಬಂಧನ

cpt
Published on

ಚನ್ನಪಟ್ಟಣ: ತಾಲೂಕಿನ ದೇವರಹಳ್ಳಿಯ ದೊಡ್ಡ ಬೀರೇಶ್ವರ ದೇವಸ್ಥಾನದ ತೋಪಿನಲ್ಲಿ ಶನಿವಾರ ಮುಳ್ಳುಹಂದಿಯನ್ನು ಕೊಂದ ಆರೋಪದ ಮೇರೆಗೆ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರ ಮೂಲದ ಆಕಾಶ್​ ಸೀತಾರಾಮ್​ ರಾಥೋಡ್​ ಹಾಗೂ ರಮೇಶ್​ ರಾಥೋಡ್​ ಪವಾರ್​ ಬಂಧಿತರು. ಆಕಾಶ್​ ಹಾಗೂ ರಮೇಶ್​ ಕಬ್ಬು ಕಟಾವು ಕಾರ್ಮಿಕರಾಗಿದ್ದು, ರಾತ್ರಿ ವೇಳೆ ಬಲೆ ಬೀಸಿ ಮುಳ್ಳುಹಂದಿಯನ್ನು ಬಲೆಗೆ ಕೆಡವಿ ಮಚ್ಚಿನಿಂದ ಹೊಡೆದು ಕೊಂದಿದ್ದರು. ಸ್ಥಳಿಯರಿಂದ ಮಾಹಿತಿ ಪಡೆದ ಚನ್ನಪಟ್ಟಣ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲಿಸಿ, ಬಲೆ ಹಾಗೂ ಮಚ್ಚನ್ನು ವಶಕ್ಕೆ ಪಡೆದು ವನ್ಯಜಿವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net