ಯುವಕನ ಅಪಹರಿಸಿ ದರೋಡೆ, ಇಬ್ಬರ ಸೆರೆ

New Project (33)
Published on

ಕಾಸರಗೋಡು: ಕುಂಬಳೆ ಪೇಟೆಯಿಂದ ಯುವಕನನ್ನು ಹಾಡಹಗಲು ಕಾರಿನಲ್ಲಿ ಅಪಹರಿಸಿ ಅವರಲ್ಲಿದ್ದ 18.46 ಲಕ್ಷ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಉಪ್ಪಿನಂಗಡಿ ನಿವಾಸಿ ಅನ್ಸೀಫ್ ಹಾಗೂ ಕಡಬ ಮರ್ದಾಲ ನಿವಾಸಿ ಇರ್ಫಾನ್ ಬಂಧಿತರು. ಆರೋಪಿಗಳು ಪುತ್ತೂರಿನಲ್ಲಿ ತಲೆಮರೆಸಿರುವ ಮಾಹಿತಿ ಅನ್ವಯ ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ವಿನೋದ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಕುಂಬಳೆ ಮುಳಿಯಡ್ಕ ನಿವಾಸಿ ಅಬ್ದುಲ್ ರಶೀದ್ ಎಂಬುವರನ್ನು ತಂಡ ಮೇ 6ರಂದು ಕುಂಬಳೆ ಪೇಟೆಯಿಂದ ಕಾರಿನಲ್ಲಿ ಕರೆದೊಯ್ದು, ಬೆದರಿಕೆಯೊಡ್ಡಿ ಬ್ಯಾಂಕ್ ಖಾತೆಯಲ್ಲಿದ್ದ 18,46,127 ರೂ.ವನ್ನು ತಮ್ಮ ಖಾತೆಗೆ ವರ್ಗಾಯಿಸಿ, ಹಲ್ಲೆ ನಡೆಸಿ ಸಂಜೆ 6ರ ವೇಳೆಗೆ ಪೆರ್ಮುದೆ ಬಳಿ ಇಳಿಸಿ ಪರಾರಿಯಾದ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದರು. ಪ್ರಕರಣದ ಮುಖ್ಯ ಆರೋಪಿ ಚೆಲ್ಲಂಗಯ ನಿವಾಸಿ ಸಯ್ಯಿದ್ ಎಂಬಾತನನ್ನು ಇತ್ತೀಚೆಗೆ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಇಬ್ಬರು ಅರೋಪಿಗಳ ಮಾಹಿತಿ ಲಭಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net