

ಉಪ್ಪಿನಂಗಡಿ: ಸಾರ್ವಜನಿಕ ಸ್ಥಳದಲ್ಲಿ ಮಾದಕದ್ರವ್ಯ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕರಿಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಾರ್ಯ ಗ್ರಾಮದ ಸೂರ್ಯ ನಿವಾಸಿ ಮಹಮ್ಮದ್ ಸಿನಾನ್(25) ಮತ್ತು ಇಳಂತಿಲ ಗ್ರಾಮದ ರಿಫಾಯಿ ನಗರ ನಿವಾಸಿ ಮಹಮ್ಮದ್ ಜಿಯಾದ್(23) ಬಂಧಿತರು. ಉಪ್ಪಿನಂಗಡಿ ಹಿರೆಬಂಡಾಡಿ ಕ್ರಾಸ್ ರಸ್ತೆ ಶಾಲೆಯ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದ ಮಾಹಿತಿ ಆಧರಿಸಿ ಗಸ್ತುನಿರತ ಎಸ್ಐ ಅವಿನಾಶ್ ತಂಡ ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ದ್ರವ್ಯಸೇವನೆ ದೃಢಪಟ್ಟಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.