ಗಾಂಜಾ ಸೇವನೆ, ಇಬ್ಬರ ಬಂಧನ

Crime Logo
Published on

ಶಿರಸಿ: ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಠಾಣೆ ಪೊಲೀಸರು ಕಸ್ತೂರ ಬಾ ನಗರದ ನಿಯಾಜ್ ದಾವುದ್ ಉಮರ್ ಮತ್ತು ಅರೆಕೊಪ್ಪದ ಬಾಲಚಂದ್ರ ಗುರುಮೂರ್ತಿ ಮಡಿವಾಳ ಎಂಬುವವರನ್ನು ಗುರುವಾರ ಬಂಧಿಸಿದ್ದಾರೆ.

ಇಬ್ಬರೂ ಶಿರಸಿ ನಗರದ ಲಿಂಗದಕೋಣ ರಸ್ತೆ ಮೀನು ಮಾರುಕಟ್ಟೆ ಹಿಂಭಾಗದಲ್ಲಿ ಗಾಂಜಾ ಪದಾರ್ಥ ಸೇವನೆ ಮಾಡಿರುವ ಸಂಶಯದ ಮೇಲೆ ವಶಕ್ಕೆ ಪಡೆದು ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಸ್​ಪಿ ಎಂ ನಾರಾಯಣ, ಡಿವೈಎಸ್​ಪಿ ಗಣೇಶ ಕೆ.ಎಲ್, ಸಿಪಿಐ ಶಶಿಕಾಂತ ವರ್ವ ಅವರ ಮಾರ್ಗದರ್ಶನ ಮತ್ತು ಪಿಎಸ್​ಐ ನಾಗಪ್ಪ ಬಿ. ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿ ನಾರಾಯಣ ರಾಠೋಡ್, ಹನುಮಂತ ಕಬಾಡಿ, ಸತೀಶ್ ಅಂಬಿಗ, ಮಲ್ಲಿಕಾರ್ಜುನ ಕುದರಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net