ಕರ್ಕಶ ಶಬ್ದದ ಬೈಕ್​ ಸವಾರಿ, ಇಬ್ಬರ ಬಂಧನ

Published on

ಕಾಸರಗೋಡು: ಬೈಕ್​ಗಳ ಸೈಲೆನ್ಸರ್​ ಹಾಗೂ ನಂಬರ್​ ಪ್ಲೇಟ್​ ಕಳಚಿಟ್ಟು, ಅತಿಯಾದ ಶಬ್ದದೊಂದಿಗೆ ರಸ್ತೆಯಲ್ಲಿ ಸಂಚರಿಸುತ್ತಾ ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡುತ್ತಿದ್ದ ಇಬ್ಬರನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಚೌಕಿ ನಿವಾಸಿ ಮಹಮ್ಮದ್​ ಜುನೈದ್​ ಬಿ.ಎ ಹಾಗೂ ಅಣಂಗೂರು ನಿವಾಸಿ ಅಹಮ್ಮದ್​ ಅಲ್​ ಹಂಬಲ್​ ಬಂಧಿತರು. ಕುಂಬಳೆ ಬದ್ರಿಯಾ ನಗರದ ರಸ್ತೆಯಲ್ಲಿ ಜನರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಶಬ್ದದೊಂದಿಗೆ ಸಂಚಾರ ನಡೆಸುತ್ತಿದ್ದಾಗ ಕುಂಬಳೆ ಠಾಣೆ ಇನ್​ಸ್ಪೆಕ್ಟರ್​ ಕೆ.ಪಿ ವಿನೋದ್​ ಕುಮಾರ್​ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದೆ.

ಈ ಇಬ್ಬರೂ ಸಾರ್ವಜನಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಬೈಕ್​ ಸವಾರಿ ನಡೆಸುತ್ತಿದ್ದ ಬಗ್ಗೆ ಸ್ಥಳಿಯ ನಾಗರಿಕರೂ ದೂರು ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net