ಮೀಟಿಂಗ್‌ಗೆ ‘ಕೊಬ್ಬರಿ’ ತಂದಿದ್ದ ಎಂಟಿಕೆ !

MTK_Kobbari
Published on

ತುಮಕೂರು: ಕೊಬ್ಬರಿ ಬೆಲೆ ಪಾತಾಳಕ್ಕಿದಿರುವ ಬಗ್ಗೆ ಯಾರೊಬ್ಬ ಶಾಸಕರು ಗಮನ ಸೆಳೆಯುವ ಪ್ರಯತ್ನ ಮಾಡಲಿಲ್ಲ. ಆದರೆ, ಕನಿಷ್ಟ ಬೆಂಬಲ ಬೆಲೆಯಲ್ಲಿ ನಫೆಡ್ ಮೂಲಕ ಕೊಂಡುಕೊಳ್ಳುತ್ತಿರುವ ಕೊಬ್ಬರಿಯಲ್ಲಿ ಗುಣಮಟ್ಟದ ಹೆಸರಿನಲ್ಲಿ ರೈತರಿಂದ ಕೊಂಡುಕೊಳ್ಳಲು ಸತಾಯಿಸುತ್ತಿದ್ದಾರೆ ಎಂದು ಶಾಸಕರಾದ ಎಂ.ಟಿ.ಕೃಷ್ಣಪ್ಪ ಹಾಗೂ ಕೆ.ಷಡಕ್ಷರಿ ಗಮನಸೆಳೆದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಗೆ ಗುಣಮಟ್ಟ ಅಳೆಯುವ ಸಾಧನ ಹಾಗೂ ಕೊಬ್ಬರಿಯೊಂದಿಗೆ ಆಗಮಿಸಿದ್ದ ಎಂಟಿಕೆ ಸಭೆಯಲ್ಲಿಯೇ ಪ್ರಾತ್ಯಕ್ಷಿಕೆ ಕೂಡ ನೀಡಿದರು. ಕೊಬ್ಬರಿ ಗುಣಮಟ್ಟವನ್ನು ಅವೈಜ್ಞಾನಿಕವಾಗಿ ನಿರ್ಧರಿಸಲಾಗುತ್ತಿದೆ ಎಂದರು.

ಮಧ್ಯಪ್ರವೇಶಿಸಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ , ಜಿಲ್ಲೆಯ ಶಾಸಕರೆಲ್ಲಾ ಒಟ್ಟಾಗಿ ಬಂದರೆ ಸೋಮವಾರ ತೋಟಗಾರಿಕೆ ಇಲಾಖೆ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡೊಣ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net