ತುಂಗಭದ್ರಾ ಜಲಾಶಯದ ಹಿನ್ನೀರ ರೈತರ ಸಂಭ್ರಮ

09ALD06
ತುಂಗಭದ್ರಾ ನದಿ ಪಾತ್ರದಲ್ಲಿ ಹುಲುಸಾಗಿ ಬೆಳೆದ ಮೆಕ್ಕೆಜೋಳ,
Published on

ಅಳವಂಡಿ: ತುಂಗಭದ್ರಾ ಜಲಾಶಯ ತುಂಬಿದರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲ, ಕಾರಣ ನೀರು ಸಂಗ್ರಹವಾದರೆ ಬೆಳೆಗಳಿಗೆ ಪೂರೈಸಬಹುದೆಂದು.

ಹಾಗೆ ಜಲಾಶಯದ ನೀರು ಖಾಲಿಯಾದಂತೆಲ್ಲ ಹಿನ್ನೀರಿನಲ್ಲಿ ಮುಳಗಡೆಯಾದ ಫಲವತ್ತಾದ ಪ್ರದೇಶ ಖಾಲಿಯಾಗುತ್ತಾದೆ. ಹಿನ್ನೀರಿನ ರೈತರು ಈ ಸ್ಥಳದಲ್ಲಿ ಬಿತ್ತನೆ ಮಾಡಿ ಉತ್ತಮ ಫಸಲು ಪಡೆಯುತ್ತಾರೆ.

ವಲಯದ ವ್ಯಾಪ್ತಿಯ ತುಂಗಭದ್ರಾ ನದಿಯ ತಟದಲ್ಲಿರುವ ಕೇಸಲಾಪುರ, ನಿಲೋಗಿಪುರ, ಹಲವಾಗಲಿ, ಬೋಚನಹಳ್ಳಿ, ತಿಗರಿ, ನೀರಲಗಿ, ಕಾತರಕಿ, ಮತ್ತೂರ, ಹನಕುಂಟಿ ಮುಂತಾದ ಗ್ರಾಮಗಳ ಜಮೀನುಗಳು ಆಣೆಕಟ್ಟೆಯ ಹಿನ್ನೀರಲ್ಲಿ ಮುಳುಗಡೆಯಾಗುತ್ತವೆ.

ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುತ್ತಿದ್ದಂತೆ ಜಮೀನುಗಳಲ್ಲಿ ನೀರು ಕಡಿಮೆಯಾಗುತ್ತವೆ, ರೈತರು ಶೇಂಗಾ, ಕಡಲೆ, ಸೂರ್ಯಕಾಂತಿ, ಅಲಸಂದಿ, ಮೆಕ್ಕಜೋಳ, ಉದ್ದು, ಭತ್ತ ಮುಂತಾದ ಬೆಳೆಗಳನ್ನು ಬೆಳೆಯಲು ಸಜ್ಜಗುತ್ತಾರೆ.

ಪ್ರಸಕ್ತ ವರ್ಷ ಮಳೆ ಕಡಿಮೆಯಾಗಿರುವುದರಿಂದ ತುಂಗಭದ್ರಾ ನದಿಗೆ ನೀರಿನ ಒಳ ಹರಿವು ಇಲ್ಲದೆ ಮುಳುಗಡೆ ಪ್ರದೇಶ ಬೇಗನೇ ಖಾಲಿಯಾಗಿದ್ದರಿಂದ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

ಹಿನ್ನೀರ ಪ್ರದೇಶದ ಸಾವಿರಾರು ಎಕರೆ ಜಮೀನುಗಳಲ್ಲಿ ರೈತರು ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಪಡೆಯುತ್ತಾರೆ. ಇದರಿಂದ ರೈತರ ಆರ್ಥಿಕ ಪರಸ್ಥಿತಿ ಕೊಂಚ ಸುಧಾರಣೆ ಕಾಣುತ್ತಿದೆ. ರಸಗೊಬ್ಬರ ಹಾಗೂ ನೀರು ಹರಿಸುವ ಪ್ರಕ್ರಿಯೆ ಇರುವುದಿಲ್ಲ.

ಹಿನ್ನೀರಿನಿಂದ ಆವೃತವಾದ ಜಮೀನು ಫಲವತ್ತಾವಾದದ್ದು ಹಾಗೂ ಬಹಳ ದಿನಗಳವರೆಗೆ ತೇವಾಂಶ ಇದ್ದು ರೈತರಿಗೆ ಅನೂಕೂಲವಾಗಲಿದೆ. ಪ್ರಸಕ್ತ ವರ್ಷ ಈ ಭಾಗದ ರೈತರು ಉತ್ತಮ ಫಸಲಿನ ನೀರಿಕ್ಷೆಯಲ್ಲಿದ್ದಾರೆ.

ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶ ಫಲವತ್ತಾದ ಮಣ್ಣಿನಿಂದ ಆವೃತವಾಗಿದ್ದು, ಬಹಳ ದಿನಗಳವರೆಗೆ ತೇವಾಂಶ ಇರುವುದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯ.ಪ್ರತಾಪಗೌಡ ನಂದನಗೌಡ, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಅಳವಂಡಿ.

ಪ್ರಸಕ್ತ ವರ್ಷ ನದಿಯ ಮೇಲ್ಬಾಗದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಜಲಾಶಯಕ್ಕೆ ಒಳ ಹರಿವು ಇಲ್ಲ ಹಾಗೂ ಜಲಾಶಯದ ನೀರನ್ನ ಅಚ್ಚು ಕಟ್ಟು ಪ್ರದೇಶದ ಬೆಳೆಗೆ ಹರಿಸುತ್ತಿದ್ದಂತೆ ಹಿನ್ನೀರ ಪ್ರದೇಶ ಖಾಲಿಯಾಗುತ್ತದೆ. ಈ ಭಾಗದ ರೈತರು ಬಿತ್ತನೆ ಕಾರ್ಯ ಆರಂಭಮಾಡುತ್ತಾರೆ.ಗವಿಸಿದ್ದಯ್ಯ ಹಿರೇಮಠ, ರೈತ ತಿಗರಿಗ್ರಾಮ

ತುಂಗಭದ್ರಾ ನದಿಯ ಡ್ಯಾಂನ ಹಿನ್ನೀರ ಪ್ರದೇಶ ನೀರು ನಿಂತು ಭೂಮಿ ಫಲವತ್ತಾಗಿ ಹಾಗೂ ತೇವಾಂಶವನ್ನು ಕಾಯ್ದು ಕೊಂಡಿರುತ್ತದೆ. ಭೂಮಿ ಫಲವತ್ತಾಗಿ ಇರುವದರಿಂದ ರಸಗೊಬ್ಬರ ಹಾಗೂ ನೀರು ಹರಿಸುವ ಖರ್ಚು ಕೂಡ ಕಡಿಮೆಯಾಗಲಿದೆ. ಶೇಂಗಾ, ಕಡಲೆ, ಮೆಕ್ಕೆಜೋಳ ಮುಂತಾದ ಬೆಳೆಯನ್ನು ಬೆಳೆಯುತ್ತೇವೆ.ಸಿದ್ದಣ್ಣ, ಹಳ್ಳಿರೈತ ಹಲವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net