More

    ವೀಕೆಂಡ್​ ಹಿನ್ನೆಲೆ KRS​ ಪ್ರವಾಸಕ್ಕೆ ಬಂದಿದ್ದ ಮೂವರು ಹಿನ್ನೀರಿನಲ್ಲಿ ಮುಳುಗಿ ದುರಂತ ಸಾವು

    ಮಂಡ್ಯ: ನೀರಿನಲ್ಲಿ ಆಟವಾಡುವ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೂವರು ದುರಂತ ಸಾವಿಗೀಡಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿನ್ನಿರಿನಲ್ಲಿ ಇಂದು (ನ.19) ನಡೆದಿದೆ.

    ಮೃತ ದುರ್ದೈವಿಗಳನ್ನು ಹರೀಶ್(32), ನಂಜುಂಡ (19) ಹಾಗೂ ಜ್ಯೋತಿ (18) ಎಂದು ಗುರುತಿಸಲಾಗಿದೆ. ಮೃತ ಮೂವರು ಕೂಡ ಮೈಸೂರಿನ ಕಾರುಣ್ಯ ಟ್ರಸ್ಟ್​ನವರು. ವೀಕೆಂಡ್​ ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು 25 ಸಿಬ್ಬಂದಿ ಕೆಆರ್​ಎಸ್​ ಹಿನ್ನೀರಿಗೆ ಬಂದಿದ್ದರು. ಈ ವೇಳೆ ನೀರಿನಲ್ಲಿ ಆಟವಾಡುವಾಗ ನೀರು ಪಾಲಾಗಿದ್ದಾರೆ.

    ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮೊದಲು ಜ್ಯೋತಿ ಹಾಗೂ ನಂಜುಂಡನ ಮೃತದೇಹ ಪತ್ತೆಯಾಗಿತ್ತು. ಸತತ ಎರಡೂವರೆ ಗಂಟೆ ಕಾರ್ಯಾಚರಣೆ ಬಳಿಕ ಹರೀಶ್ ಮೃತದೇಹವೂ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.

    ಮೃತರಲ್ಲಿ ಜ್ಯೋತಿ ವಿದ್ಯಾರ್ಥಿ, ಹರೀಶ್ ಕಾರುಣ್ಯ ಟ್ರಸ್ಟ್​ನಲ್ಲಿ ಕೇರ್ ಟೇಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಂಜುಂಡ ಈಗಷ್ಟೇ ಐಟಿಐ ಮುಗಿಸಿ ಕೆಲಸಕ್ಕೆ ಸೇರಿದ್ದರು. ಭಾನುವಾರ ರಜೇ ಇದ್ದ ಕಾರಣ ಟ್ರಸ್ಟ್​ನ ಸಿಬ್ಬಂದಿ ಹಾಗೂ ಮಕ್ಕಳು ಕೆಆರ್​ಎಸ್​ ಪ್ರವಾಸಕ್ಕೆ ಬಂದಿದ್ದರು. ಇವರಲ್ಲಿ ಮೂವರು ನೀರುಪಾಲಾಗಿದ್ದಾರೆ. ಶವಗಾರದ ಬಳಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು 2 ದಿನದಲ್ಲಿ ತಲುಪಬಹುದು: ಗಡ್ಕರಿ ಭರವಸೆ

    ತಿರುಮಲೆಯಲ್ಲಿ ಪುಷ್ಪಯಾಗ ಅದ್ಧೂರಿ : ಮಲೆಯಪ್ಪಸ್ವಾಮಿ ಉತ್ಸವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts